2022ರಿಂದ 10 ತಂಡಗಳ ಐಪಿಎಲ್ ಕ್ರಿಕೆಟ್ ಗೆ ಅನುಮೋದನೆ ನೀಡಿದ ಬಿಸಿಸಿಐ

Update: 2020-12-24 11:12 GMT

ಅಹ್ಮದಾಬಾದ್,ಡಿ.24: ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಸರಣಿಯಲ್ಲಿ ಇದುವರೆಗೆ 8 ತಂಡಗಳು ಭಾಗವಹಿಸುತ್ತಿದ್ದು, ಇನ್ನು 2022ರಿಂದ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಗೊಂಡು ಒಟ್ಟು ಹತ್ತು ತಂಡಗಳು ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಈ ಕುರಿತಾದಂತೆ ಬಿಸಿಸಿಐಯು ಅಹ್ಮದಾಬಾದ್ ನಲ್ಲಿ ನಡೆಸಿದ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ ಎಂದು hindustantimes.com ವರದಿ ಮಾಡಿದೆ.

ಲಾಸ್ ಏಂಜಲೀಸ್ ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲೂ ಟಿ-20 ಮಾದರಿಯ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಚರ್ಚೆ ನಡೆಸಲಾಗುವುದು. ಈ ಕುರಿತು ಐಸಿಸಿಯು ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಇನ್ನು, ಎಲ್ಲಾ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರಿಗೆ (ಮಹಿಳೆಯರಿಗೆ ಮತ್ತು ಪುರುಷರಿಗೆ) ಕೋವಿಡ್ ಕಾರಣದಿಂದ ಮೊಟಕುಗೊಳಿಸಿದ ಪಂದ್ಯಾಟದ ಕುರಿತಾದಂತೆ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದೂ ಸಭೆಯಲ್ಲಿ ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News