ಸಾಂತಾಕ್ಲಾಸ್ ಉಡುಪು ಧರಿಸಿ ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯ ಕೋರಿದ ಸಚಿನ್

Update: 2020-12-26 04:51 GMT

ಹೊಸದಿಲ್ಲಿ: ಲಿಟಲ್ ಮಾಸ್ಟರ್’ ಸಚಿನ್ ತೆಂಡುಲ್ಕರ್ ಸಾಂತಾಕ್ಲಾಸ್ ಉಡುಪನ್ನು ಧರಿಸಿ ತಮ್ಮ ಅಭಿಮಾನಿಗಳು ಹಾಗೂ ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದ್ದಾರೆ. ತೆಂಡುಲ್ಕರ್ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

 ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು! ಕ್ರಿಸ್ಮಸ್ ಯಾವಾಗಲೂ ಒಗ್ಗೂಡಿಸುವಿಕೆ ಹಾಗೂ ಉಡುಗೊರೆ ಕೊಡುವುದು. ನಮ್ಮ ಸುತ್ತಮುತ್ತಲಿನ ಜನರಿಗೆ ಸರಳ ಮಾರ್ಗದಲ್ಲಾದರೂ ಇದನ್ನು ವಿಶೇಷವಾಗಿಸೋಣ ಎಂದು ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ ಹಾಗೂ ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟ್ವಿಟರ್‌ನ ಮೂಲಕ ಕ್ರಿಸ್ಮಸ್ ಶುಭಾಶಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News