×
Ad

ಶುಭಮನ್ ಗಿಲ್ ಢಿಕ್ಕಿಯಾದರೂ ಆಕರ್ಷಕ ಕ್ಯಾಚ್ ಪಡೆದ ಜಡೇಜ

Update: 2020-12-26 13:05 IST

ಮೆಲ್ಬೋರ್ನ್: ಟೀಮ್ ಇಂಡಿಯಾ ಟಾಸ್ ಸೋತಿದ್ದರೂ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಎರಡನೇ ಟೆಸ್ಟ್‌ನ ಮೊದಲ ದಿನವಾದ ಶನಿವಾರ ಬೆಳಗ್ಗಿನ ಅವಧಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಜಸ್‌ಪ್ರೀತ್ ಬುಮ್ರಾ ಅವರು ಜೋ ಬರ್ನ್ಸ್ ವಿಕೆಟ್ ಪಡೆದರೆ, ಸ್ಪಿನ್ನರ್ ಅಶ್ವಿನ್ ಅವರು ವೇಡ್ ಹಾಗೂ ಸ್ಮಿತ್ ವಿಕೆಟ್ ಪಡೆದ ಕಾರಣ 15ನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 38ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

 11ನೇ ಓವರ್‌ನಲ್ಲಿ ಅಶ್ವಿನ್ ಸ್ಪಿನ್ ದಾಳಿಗಿಳಿದರು. ತನ್ನ ಎರಡನೇ ಓವರ್‌ನಲ್ಲಿ ಮ್ಯಾಥ್ಯೂ ಹೇಡ್(30,39 ರನ್)ವಿಕೆಟ್ ಪಡೆಯಲು ಶಕ್ತರಾದರು. ಅಶ್ವಿನ್ ಬೌಲಿಂಗ್‌ನಲ್ಲಿ ವೇಡ್ ನೀಡಿದ ಕ್ಯಾಚನ್ನು ಪಡೆಯಲು ಮುಂದಾಗಿದ್ದ ರವೀಂದ್ರ ಜಡೇಜಗೆ ಚೊಚ್ಚಲ ಪಂದ್ಯವನ್ನಾಡಿದ್ದ ಶುಭಮನ್ ಗಿಲ್ ಢಿಕ್ಕಿಯಾದರೂ ಅದ್ಭುತ ಕ್ಯಾಚ್ ಪಡೆಯಲು ಸಫಲರಾಗಿದ್ದಾರೆ.

 ಅಶ್ವಿನ್‌ರನ್ನು ಬೇಗನೆ ದಾಳಿಗಿಳಿಸಿದ ನಾಯಕ ಅಜಿಂಕ್ಯ ರಹಾನೆ ಹೆಜ್ಜೆ ಫಲ ನೀಡಿತು. ಸ್ಪಿನ್ ಬೌಲಿಂಗ್‌ನಲ್ಲಿ ವೇಡ್ ಹೊಡೆದ ಚೆಂಡು ಮೇಲಕ್ಕೆ ಚಿಮ್ಮಿತು. ಮಿಡ್‌ವಿಕೆಟ್‌ನಲ್ಲಿ ಫೀಲ್ಡಿಂಗ್ ನಿರತ ಅದ್ಭುತ ಫೀಲ್ಡರ್ ಜಡೇಜ ಚೆಂಡು ದಿಟ್ಟಿಸುತ್ತಾ ಓಡಿಬಂದರು. ಇದೇ ವೇಳೆ ಗಿಲ್ ಕೂಡ ಕ್ಯಾಚ್ ಪಡೆಯಲು ಮಿಡ್ ಆನ್‌ನತ್ತ ಓಡಿಬಂದರು. ಜಡೇಜರ ಸನ್ನೆಯನ್ನು ಗಮನಿಸದ ಗಿಲ್ ಅವರಿಗೆ ಢಿಕ್ಕಿಯಾದರು. ಡಿಕ್ಕಿಯಾದ ಹೊರತಾಗಿಯೂ ಜಡೇಜ ಅದ್ಭುತ ಕ್ಯಾಚ್ ಪಡೆಯಲು ಸಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News