ಬಾಕ್ಸಿಂಗ್ ಡೇ ಟೆಸ್ಟ್: ಕುಸಿದ ಭಾರತಕ್ಕೆ ರಹಾನೆ ಆಸರೆ
Update: 2020-12-27 09:15 IST
ಮೆಲ್ಬೋರ್ನ್, ಡಿ.27: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ ಸಾಧಿಸಿದ್ದ ಮೇಲುಗೈ ಉಳಿಸಿಕೊಳ್ಳಲು ಪ್ರವಾಸಿ ಭಾರತ ತಂಡ ವಿಫಲವಾಗಿದೆ. ಕುಸಿದ ಭಾರಕ್ಕೆ ನಾಯಕ ರಹಾನೆ ಆಸರೆಯಾಗಿದ್ದಾರೆ.
ಇತ್ತೀಚಿನ ವರದಿಗಳು ಬಂದಾದ ಭಾರತ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 164 ರನ್ ಗಳಿಸಿತ್ತು. ಭಾರತ ಇನ್ನೂ 29 ರನ್‌ಗಳ ಇನಿಂಗ್ಸ್ ಹಿನ್ನಡೆ ಹೊಂದಿದೆ. ನಾಯಕ ಅಜಿಂಕ್ಯ ರಹಾನೆ (43) ಮತ್ತು ರಿಷಬ್ ಪಂತ್ (28) ಕ್ರೀಸ್‌ನಲ್ಲಿದ್ದಾರೆ.
ಒಂದು ವಿಕೆಟ್ ನಷ್ಟಕ್ಕೆ 36 ರನ್‌ಗಳಿಂದ ದಿನದ ಆಟ ಆರಂಭಿಸಿದ ಭಾರತ ತಂಡ ಚೆನ್ನಾಗಿ ಆಡುತ್ತಿದ್ದ ಶುಭಮನ್ ಗಿಲ್ (45) ಅವರ ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಮತ್ತೊಬ್ಬ ಭರವಸೆಯ ಆಟಗಾರ ಚೇತೇಶ್ವರ ಪೂಜಾರ (17) ಕೂಡಾ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು.