ಎರಡನೇ ಟೆಸ್ಟ್: ಅಜಿಂಕ್ಯ ರಹಾನೆ ಶತಕ, ಸುಸ್ಥಿತಿಯಲ್ಲಿ ಭಾರತ

Update: 2020-12-27 07:03 GMT

ಮೆಲ್ಬೋರ್ನ್: ಭಾರತವು ಸಂಕಷ್ಟದಲ್ಲಿದ್ದಾಗ ಆಸರೆಯಾದ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ ದಾಖಲಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.

 ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನ ಎರಡನೇ ದಿನವಾದ ರವಿವಾರ ಕಮಿನ್ಸ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದ ರಹಾನೆ 12ನೇ ಟೆಸ್ಟ್ ಶತಕವನ್ನು ದಾಖಲಿಸಿದರು. 195 ಎಸೆತಗಳನ್ನು ಎದುರಿಸಿದ ರಹಾನೆ 12 ಬೌಂಡರಿಗಳ ನೆರವಿನಿಂದ ಶತಕವನ್ನು ಪೂರೈಸಿದರು.

ಭಾರತವು 173 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ತಂಡವನ್ನು ಆಧರಿಸಿದ ರಹಾನೆ ಆಲ್‌ರೌಂಡರ್ ರವೀಂದ್ರ ಜಡೇಜ ಅವರೊಂದಿಗೆ ಆರನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನಡೆಸಿ ತಂಡವನ್ನು ಆಧರಿಸಿದರು.

ಭಾರತವು 91ನೇ ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದು, 82 ರನ್ ಮುನ್ನಡೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News