ರೋಹಿತ್‌ಗೆ ಸ್ಥಾನ ತೆರವುಗೊಳಿಸಲಿರುವ ಮಯಾಂಕ್

Update: 2021-01-06 06:48 GMT

 ಸಿಡ್ನಿ, ಜ.5: ಇಲ್ಲಿ ಗುರುವಾರ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರು ರೋಹಿತ್ ಶರ್ಮಾರಿಗೆ ಸ್ಥಾನ ತೆರವುಗೊಳಿಸಬೇಕಾಗುತ್ತದೆ.

  ಎಂಟು ಟೆಸ್ಟ್ ಇನಿಂಗ್ಸ್‌ಗಳ ಪೈಕಿ ಅಗರ್ವಾಲ್ ಏಳರಲ್ಲಿ ವೈಫಲ್ಯ ಅನುಭವಿಸಿದ್ದಾರೆ.ಈ ಕಾರಣದಿಂದಾಗಿ ಅವರಿಗೆ ಮೂರನೇ ಟೆಸ್ಟ್‌ನಲ್ಲಿ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ಕಳೆದ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಗಾಯಗೊಂಡ ಉಮೇಶ್ ಯಾದವ್ ಬದಲಿಗೆ ಮುಂಬೈ ಸೀಮರ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಶಾರ್ದುಲ್ ಠಾಕೂರ್ ಅವರು ಸ್ಥಾನ ಪಡೆಯುವ ಸಾಧ್ಯತೆ ಕಂಡು ಬಂದಿದ್ದರೂ, ಕೆಲವು ಹಿರಿಯ ಆಟಗಾರರರು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ವೇಳೆ ಭಾರತದ ವೇಗದ ಬೌಲರ್ ಸೈನಿ ಅವರನ್ನು ಆಸ್ಟ್ರೇಲಿಯದ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಬಳಸುವ ಸಾಧ್ಯತೆ ಇದೆ. ಠಾಕೂರ್ ಎರಡು ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಹೈದರಬಾದ್‌ನಲ್ಲಿ 2018, ಅ.12ರಿಂದ 14ರ ತನಕ ನಡೆದ ಟೆಸ್ಟ್‌ನಲ್ಲಿ ಚೊಚ್ಚಲ ಪ್ರವೇಶ ಪಡೆದಿದ್ದರೂ ಎರಡು ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 4 ರನ್ ಗಳಿಸಿದ್ದರು. ನವದೀಪ್ ಸೈನಿ ಒಂದು ವೇಳೆ ಪ್ರವೇಶ ಪಡೆದರೆ ಅವರಿಗೆ ಚೊಚ್ಚಲ ಪಂದ್ಯವಾಗಲಿದೆ. ಈ ನಡುವೆ ಟಿ. ನಟರಾಜನ್ ಹೆಸರು ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News