ಹರಿಣ ಪಡೆಗೆ ಸರಣಿ ಜಯ

Update: 2021-01-06 06:47 GMT

ಜೋಹಾನ್ಸ್‌ಬರ್ಗ್, ಜ.5: ಶ್ರೀಲಂಕಾ ವಿರುದ್ಧ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕ ತಂಡ 10 ವಿಕೆಟ್‌ಗಳ ಜಯ ಗಳಿಸಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಪಂದ್ಯದ ಮೂರನೇ ದಿನವಾಗಿರುವ ಮಂಗಳವಾರ ಶ್ರೀಲಂಕಾ ಎರಡನೇ ಇನಿಂಗ್ಸ್‌ನಲ್ಲಿ 56.5 ಓವರ್‌ಗಳಲ್ಲಿ 211 ರನ್‌ಗಳಿಗೆ ಆಲೌಟಾಗಿದೆ. ಎರಡನೇ ದಿನದಾಟದಂತ್ಯಕ್ಕೆ ಶ್ರೀಲಂಕಾ 4 ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಿತ್ತು. ಕರಣರತ್ನೆ ಔಟಾಗದೆ 91 ರನ್ ಗಳಿಸಿದ್ದರು. ಮೂರನೇ ದಿನ ಆಟ ಮುಂದುವರಿಸಿ 61 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಲುಂಗಿ ಗಿಡಿ(44ಕ್ಕೆ 4), ಆ್ಯನ್ರಿಕ್ ನೋರ್ಟ್ಜ್ (64ಕ್ಕೆ 2) , ಲೂಥೊ ಸಿಪಾಮ್(40ಕ್ಕೆ 3) ದಾಳಿಗೆ ಸಿಲುಕಿದ ಶ್ರೀಲಂಕಾ ಇನಿಂಗ್ಸ್ ಸೋಲು ತಪ್ಪಿಸಲು ಯಶಸ್ವಿಯಾಗಿದೆ. ಲಂಕಾದ ನಾಯಕ ಕರುಣರತ್ನೆ ಶತಕ (103) ಮೂಲಕ ಹೋರಾಟ ನಡೆಸಿದರೂ ತಂಡಸ ಸೋಲು ತಪ್ಪಲಿಲ್ಲ. ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 67 ರನ್‌ಗಳ ಸವಾಲು ಪಡೆದ ದಕ್ಷಿಣ ಆಫ್ರಿಕ ತಂಡದ ಇನಿಂಗ್ಸ್ ಆರಂಭಿಸಿದ ಡೀನ್ ಎಲ್ಗರ್(31) ಮತ್ತು ಏಡೆನ್ ಮರ್ಕರ್ರಮ್ (36) ಮುರಿಯದ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News