ಆಸ್ಟ್ರೇಲಿಯ ವಿರುದ್ದ 3ನೇ ಟೆಸ್ಟ್: ಇನಿಂಗ್ಸ್ ಆರಂಭಿಸಲು ರೋಹಿತ್ ಶರ್ಮಾ ಸಜ್ಜು

Update: 2021-01-06 08:34 GMT

ಮುಂಬೈ: ಸಿಡ್ನಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ದ ಮೂರನೇ ಟೆಸ್ಟ್ ಗೆ ಆಡುವ 11ರ ಬಳಗವನ್ನು ಪ್ರಕಟಿಸಲಾಗಿದ್ದು, ಮಯಾಂಕ್ ಅಗರ್ವಾಲ್ ಬದಲಿಗೆ ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಲಿದ್ದಾರೆ. ನವದೀಪ್ ಸೈನಿ ಚೊಚ್ಚಲ ಪಂದ್ಯ ಆಡಲು ಸಜ್ಜಾಗಿದ್ದಾರೆ.

ಸೈನಿ ಅವರು ಗಾಯಗೊಂಡಿರುವ ವೇಗದ ಬೌಲರ್ ಉಮೇಶ್ ಯಾದವ್ ಬದಲಿಗೆ ಆಡುವ 11ರ ಬಳಗ ಸೇರಿಕೊಂಡಿದ್ದಾರೆ.

ಸೈನಿ ಹೊರತುಪಡಿಸಿ ಮೆಲ್ಬೋರ್ನ್ ಟೆಸ್ಟ್ ನಲ್ಲಿ ಆಡಿರುವ ಆಟಗಾರರನ್ನೇ ಸಿಡ್ನಿ ಟೆಸ್ಟ್ ಗೆ ಕಣಕ್ಕಿಳಿಸಲಾಗಿದೆ.

ಸಿಡ್ನಿಯಲ್ಲಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ರೋಹಿತ್ ರನ್ನು ಸರಣಿಯ ಉಳಿದೆರಡು ಪಂದ್ಯಗಳಿಗೆ ಸೇರಿಸಿಕೊಳ್ಳಲಾಗಿದೆ. ರೋಹಿತ್ ಉಳಿದೆರಡು ಪಂದ್ಯಗಳಿಗೆ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ವೇಳೆ ಕಾಣಿಸಿಕೊಂಡಿದ್ದ ಗಾಯದಿಂದಾಗಿ ಸೀಮಿತ ಓವರ್ ಸರಣಿ ಹಾಗೂ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು.

ಸೈನಿ ಇದೇ ಮೊದಲ ಬಾರಿ ಟೆಸ್ಟ್ ಕ್ಯಾಪ್ ಧರಿಸಲಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ವೇಳೆ ಕಾಲುನೋವಿಗೆಒಳಗಾಗಿರುವ ಉಮೇಶ್ ಯಾದವ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಮೂರನೇ ಟೆಸ್ಟ್ ಗೆ ಭಾರತದ 11ರ ಬಳಗ: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ನಾಯಕ), ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಮುಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News