×
Ad

ಬೆನ್ನುಬೆನ್ನಿಗೆ ಎರಡು ಕ್ಯಾಚ್ ಬಿಟ್ಟು ಟ್ರೋಲ್ ಆದ ರಿಷಭ್ ಪಂತ್

Update: 2021-01-07 15:04 IST

ಸಿಡ್ನಿ: ಟೀಮ್ ಇಂಡಿಯಾದ ವಿಕೆಟ್-ಕೀಪರ್ ರಿಷಭ್ ಪಂತ್ ಆಸ್ಟ್ರೇಲಿಯದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ವಿಲ್ ಪುಕೋವ್ ಸ್ಕಿ ಅವರು ನೀಡಿದ್ದ ಎರಡು ಕ್ಯಾಚ್ ಗಳನ್ನು ಕೈಚೆಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

ಸಿಡ್ನಿಯಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್ ನ ಮೊದಲ ದಿನ ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಕ್ಯಾಚ್ ಕೈಬಿಟ್ಟಿದ್ದ ರಿಷಭ್ 25ನೇ ಓವರ್ ನಲ್ಲಿ ಮುಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ  ಆಸ್ಟ್ರೇಲಿಯದ ಆರಂಭಿಕ ಆಟಗಾರನನ್ನು ಔಟ್ ಮಾಡುವ ಮತ್ತೊಂದು ಅವಕಾಶವನ್ನು ಕೈಚೆಲ್ಲಿದರು.

ಕ್ಯಾಚ್ ಪಡೆಯಲು ವಿಫಲವಾಗಿರುವ ಪಂತ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 23ರ ವಯಸ್ಸಿನ ಪಂತ್ ಬದಲಿಗೆ ವೃದ್ದಿಮಾನ್ ಸಹಾಗೆ ಮತ್ತೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

ವಿಶ್ವ ಕ್ರಿಕೆಟ್ ನಲ್ಲಿ ಫೀಲ್ಡಿಂಗ್ ಗುಣಮಟ್ಟ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಭಾರತ-ಆಸ್ಟ್ರೇಲಿಯ ಸರಣಿಗಳ ವೇಳೆ ಸುಮಾರು 2 ಡಜನ್ ಕ್ಯಾಚ್ ಗಳನ್ನು ಕೈಚೆಲ್ಲಲಾಗಿದೆ. ಟಿ-20 ಸರಣಿಯ ಬಳಿಕ ಟೆಸ್ಟ್‍ ನಲ್ಲಿ ಹೆಚ್ಚು ಕ್ಯಾಚ್ ಕೈಬಿಡಲಾಗಿದೆ. ಸಿಡ್ನಿಯಲ್ಲಿ ಪಂತ್ ಅವರು ಎರಡು ಸುಲಭ ಕ್ಯಾಚ್ ಬಿಟ್ಟಿದ್ದಾರೆ. ಅಡಿಲೇಡ್ ಹಾಗೂ ಮೆಲ್ಬೋರ್ನ್ ಟೆಸ್ಟ್ ನಲ್ಲೂ ಹಲವು ಅವಕಾಶವನ್ನು ಕೈಬಿಡಲಾಗಿತ್ತು ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.

ಪಂತ್ ಅವರು ಸಹಾಗಿಂತ ಸ್ವಲ್ಪ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಈ ಇಬ್ಬರೊಳಗೆ ಹೋಲಿಕೆ ಇಲ್ಲ. ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಕೈಬಿಟ್ಟಿರುವ ಕ್ಯಾಚ್ ದುಬಾರಿಯಾಗಿವೆ ಎಂದು ಇನ್ನೋರ್ವ ಅಭಿಮಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News