ಆಸ್ಟ್ರೇಲಿಯ ಓಪನ್ ಚಾಂಪಿಯನ್ : ಕೆನಿನ್ ಮೂರನೇ ಸುತ್ತಿಗೆ
Update: 2021-01-09 00:06 IST
ಸಿಡ್ನಿ, ಜ.8ಆಸ್ಟ್ರೇಲಿಯ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್ ಶುಕ್ರವಾರ ಅಬುಧಾಬಿ ಓಪನ್‌ನ ಮೂರನೇ ಸುತ್ತಿಗೆ ತಲುಪಿದ್ದಾರೆ.
ಎದುರಾಳಿ ಕರ್ಸ್ಟನ್ ಫ್ಲಿಪ್ಕೆನ್ಸ್ ಗಾಯಗೊಂಡು ಪಂದ್ಯದಿಂದ ನಿವೃತ್ತರಾದರು. ಇದರಿಂದಾಗಿ ಕೆನಿನ್ ಸುಲಭವಾಗಿ ಮೂರನೇ ಸುತ್ತು ತಲುಪಿದರು.
ಫ್ಲಿಪ್ಕೆನ್ಸ್ ಮೊದಲ ಸೆಟ್‌ನ್ನು 7-5ರಿಂದ ಮೇಲುಗೈ ಸಾಧಿಸಿದ್ದರು. ಎರಡನೇಯ ಸೆಟ್‌ನಲ್ಲಿ 5-4ರಿಂದ ಹಿನ್ನಡೆ ಅನುಭವಿಸಿದ್ದರು.
ಕೆನಿನ್ ಮೂರನೇ ಸುತ್ತಿನಲ್ಲಿ 13ನೇ ಶ್ರೇಯಾಂಕದ ಯುಲಿಯಾ ಪುಟಿನ್ಸೆವಾ ಅಥವಾ ಬಾರ್ಬೊರಾ ಕ್ರೆಜ್ಕಿಕೋವಾರನ್ನು ಎದುರಿಸಲಿದ್ದಾರೆ. 15ನೇ ಶ್ರೇಯಾಂಕಿತೆ ಓನ್ಸ್ ಜಬೂರ್ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಕ್ಯಾಥರಿನಾ ಬೊಂಡರೆಂಕೊ ವಿರುದ್ಧ 5-7, 6-3, 6-2 ಸೆಟ್‌ಗಳಿಂದ ಜಯಗಳಿಸಿದರು. ಕಳೆದ ವರ್ಷ ಆಸ್ಟ್ರೇಲಿಯ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಜಬೂರ್ ಅವರಿಗೆ ನಾಲ್ಕನೇ ಶ್ರೇಯಾಂಕಿತೆ ಆರ್ಯನಾ ಸಬಲೆಂಕಾ ಮೂರನೇ ಸುತ್ತಿನಲ್ಲಿ ಎದುರಾಳಿಯಾಗುವ ಸಾಧ್ಯತೆ ಇದೆ.