ನಾಲ್ಕನೇ ಟೆಸ್ಟ್ ಗೆ ರವೀಂದ್ರ ಜಡೇಜ ಅಲಭ್ಯ?

Update: 2021-01-10 04:42 GMT

ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜರ ಎಡಗೈ ಹೆಬ್ಬೆರಳಿಗೆ ಚೆಂಡು ತಗಲಿ ಬೆರಳು ಬಿರುಕುಬಿಟ್ಟಿರುವ ಕಾರಣ ಅವರು ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ನಾಲ್ಕನೇ ಹಾಗೂ ಅಂತಿಮಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಶನಿವಾರ ಮೊಣಕೈಗೆ ಗಾಯ ಮಾಡಿಕೊಂಡಿದ್ದ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಅವರ ಗಾಯ ಗಂಭೀರವಾಗಿಲ್ಲ ಎಂದು ಗೊತ್ತಾಗಿದ್ದು, ಅವರು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.

3ನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಆಸ್ಟ್ರೇಲಿಯ ವೇಗಿಗಳ ಶಾರ್ಟ್ ಎಸೆತಗಳಿಗೆ ಗಾಯಕ್ಕೆ ತುತ್ತಾಗಿದ್ದ ಜಡೇಜ ಹಾಗೂ ಪಂತ್ ಸ್ಕಾನಿಂಗ್‌ಗೆ ಒಳಗಾಗಿದ್ದರು.

 ರವೀಂದ್ರ ಜಡೇಜ ಅವರ ಎಡ ಹೆಬ್ಬೆರಳು ಬಿರುಕು ಬಿಟ್ಟಿದೆ. ಅವರಿಗೆ ಗ್ಲೌಸ್ ಧರಿಸಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟವಾಗಲಿದೆ.ಅವರು ಕನಿಷ್ಠ 2ರಿಂದ 3ವಾರ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದು, ಅಂತಿಮ ಟೆಸ್ ್ಟಗೆ ಲಭ್ಯವಿರುವುದು ಅನುಮಾನ. ಪಂತ್‌ಗೆ ಆಗಿರುವ ಗಾಯ ಗಂಭೀರವಾಗಿಲ್ಲದ ಕಾರಣ ಅವರು ಬ್ಯಾಟಿಂಗ್ ಮಾಡಬಲ್ಲರುೞೞಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News