ಕೃನಾಲ್ ಪಾಂಡ್ಯ ನಿಂದನೀಯ ಭಾಷೆಗೆ ಬೇಸತ್ತು ಬರೋಡ ತಂಡದಿಂದ ಹೊರ ನಡೆದ ದೀಪಕ್ ಹೂಡ

Update: 2021-01-10 12:17 GMT

  ವಡೋದರ: ನಾಯಕ ಕೃನಾಲ್ ಪಾಂಡ್ಯ ಅವರ ನಿಂದನೀಯ ಭಾಷೆಗೆ ಬೇಸತ್ತು ಉಪ ನಾಯಕ ದೀಪಕ್ ಹೂಡ ಸಯ್ಯದ್ ಮುಷ್ತಾಕ್ ಟ್ವೆಂಟಿ-20 ಟೂರ್ನಮೆಂಟ್ ಆರಂಭಕ್ಕೆ ಮೊದಲೇ ಬರೋಡ ತಂಡದಿಂದ ಹೊರ ನಡೆದಿದ್ದಾರೆ. ಬರೋಡಾ ಕ್ರಿಕೆಟ್ ಸಂಸ್ಥೆಯ ಆಡಳಿತಕ್ಕೆ ಪತ್ರ ಬರೆದಿರುವ ಹೂಡ,ಪಾಂಡ್ಯ ನನ್ನ ಎದುರು ದಾದಾಗಿರಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹೂಡ ಹಿರಿಯ ಆಲ್ ರೌಂಡರ್ ಆಗಿದ್ದು, ಬ್ಯಾಟಿಂಗ್ ಸರದಿಯ ಪ್ರಮುಖ ಸದಸ್ಯನಾಗಿದ್ದಾರೆ. ಅವರೀಗ ತಂಡದಿಂದ ಹೊರ ನಡೆದಿರುವ ಘಟನೆ ತಂಡ ಹಾಗೂ ಕೋಚ್‌ಗೆ ಗೊಂದಲ ಉಂಟುಮಾಡಿದೆ.

ಬಿಸಿಎಗೆ ಇ-ಮೇಲ್ ಮಾಡಿರುವ ಹೂಡ, ‘‘ನಾನು ಕಳೆದ 11 ವರ್ಷಗಳಿಂದ ಬರೋಡ ಕ್ರಿಕೆಟ್ ಸಂಸ್ಥೆಯ ಪರವಾಗಿ ಆಡುತ್ತಿದ್ದೇನೆ. ಈಗ ನಾನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಆಯ್ಕೆಯಾಗಿರುವೆ. ನಾನು ನಿರಾಶೆಗೊಂಡಿದ್ದೇನೆ, ಖಿನ್ನತೆಗೆ ಒಳಗಾಗಿದ್ದೇನೆ ಹಾಗೂ ಒತ್ತಡದಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ತಂಡದ ನಾಯಕ ಕೃನಾಲ್ ಪಾಂಡ್ಯ ನನ್ನ ಸಹ ಆಟಗಾರರು ಹಾಗೂ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಇತರ ರಾಜ್ಯ ತಂಡಗಳ ಆಟಗಾರರ ಎದುರೇ ನನಗೆ ನಿಂದನೀಯ ಭಾಷೆಗಳನ್ನು ಬಳಸುತ್ತಿದ್ದಾರೆ. ಅಭ್ಯಾಸ ಮಾಡುತ್ತಿದ್ದಾಗ ನನ್ನನ್ನು ತಡೆದಿದ್ದ ಅವರು(ಪಾಂಡ್ಯ)ದಾದಾಗಿರಿ ತೋರಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಿಲ್ಲ’’ಎಂದು ಬರೆದಿದ್ದಾರೆ.

ಹೂಡ ಬರೋಡದ ಪರ 43 ಪ್ರಥಮ ದರ್ಜೆಪಂದ್ಯಗಳನ್ನು ಆಡಿದ್ದು, 123 ಟಿ-20 ಪಂದ್ಯಗಳಲ್ಲೂ ಆಡಿದ್ದಾರೆ. ....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News