ಮೂರನೇ ಟೆಸ್ಟ್: ಆಸ್ಟ್ರೇಲಿಯ ವಿರುದ್ಧದ ಪಂದ್ಯ ಡ್ರಾಗೊಳಿಸಿದ ಭಾರತ

Update: 2021-01-11 11:08 GMT
ರವಿಚಂದ್ರನ್ ಅಶ್ವಿನ್ ಹಾಗೂ ಹನುಮ ವಿಹಾರಿ

ಸಿಡ್ನಿ: ವಿಕೆಟ್‍ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಹಾಗೂ ಹಿರಿಯ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿಯಾಗಿದೆ.

ಮೂರನೇ ಟೆಸ್ಟ್ ಪಂದ್ಯದ ಗೆಲುವಿಗೆ 407 ರನ್ ಕಠಿಣ ಗುರಿ ಬೆನ್ನಟ್ಟಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ 131 ಓವರ್ ಗಳಲ್ಲಿ  5 ವಿಕೆಟ್ ಗಳ ನಷ್ಟಕ್ಕೆ 334 ರನ್ ಗಳಿಸಿ ಪಂದ್ಯವನ್ನು ಡ್ರಾಗೊಳಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಉಳಿಸಿಕೊಂಡಿದೆ. ಬ್ರಿಸ್ಬೇನ್ ನಲ್ಲಿ ನಡೆಯಲಿರುವ 4ನೇ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಪ್ರಮುಖವಾಗಿದೆ.

ಗೆಲ್ಲಲು ಕಠಿಣ ಗುರಿ ಪಡೆದಿದ್ದ ಭಾರತ 5ನೇ ಹಾಗೂ ಅಂತಿಮ ದಿನವಾದ ಸೋಮವಾರ  98 ರನ್ ಗೆ 2 ವಿಕೆಟ್ ನಷ್ಟಕ್ಕೆ ಬ್ಯಾಟಿಂಗ್ ಮುಂದುವರಿಸಿತು. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ(77, 205 ಎಸೆತ, 12 ಬೌಂಡರಿ)ಮತ್ತೊಮ್ಮೆ ತಾಳ್ಮೆಯ ಅರ್ಧಶತಕದಿಂದ ತಂಡ ಪಂದ್ಯ ಡ್ರಾಗೊಳಿಸುವ ವಿಶ್ವಾಸ ಮೂಡಿಸಿದರು.

ಮೊದಲ ಇನಿಂಗ್ಸ್ ವೇಳೆ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರೂ ಎರಡನೇ ಇನಿಂಗ್ಸ್ ನಲ್ಲಿ ಆಕರ್ಷಕ ಬ್ಯಾಟಿಂಗ್ ಮಾಡಿದ ಪಂತ್ 118 ಎಸೆತಗಳನ್ನು ಎದುರಿಸಿ 12 ಬೌಂಡರಿ,3 ಸಿಕ್ಸರ್ ಗಳನ್ನು ಸಿಡಿಸಿ ಪಂದ್ಯ ಡ್ರಾ ಮಾಡಿಕೊಳ್ಳಲು ಮುಖ್ಯ ಪಾತ್ರವಹಿಸಿದರು. ರವಿಚಂದ್ರನ್ ಅಶ್ವಿನ್(ಔಟಾಗದೆ 39) ಹಾಗೂ ಹನುಮ ವಿಹಾರಿ(ಔಟಾಗದೆ 23) ಆರನೇ ವಿಕೆಟ್‍ಗೆ ಮುರಿಯದ ಜೊತೆಯಾಟದಲ್ಲಿ ಅರ್ಧಶತಕ(62) ಜೊತೆಯಾಟ ನಡೆಸಿ ಆಸ್ಟ್ರೇಲಿಯಕ್ಕೆ ಗೆಲುವನ್ನು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News