ಹನುಮ ವಿಹಾರಿಗೆ ಗಾಯದ ಸಮಸ್ಯೆ; ಕೊನೆಯ ಟೆಸ್ಟ್ ಗೆ ಅಲಭ್ಯ

Update: 2021-01-11 15:15 GMT

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತದ ಆಟಗಾರರ ಗಾಯದ ಪಟ್ಟಿ ಬೆಳೆಯುತ್ತಲೇ  ಇದೆ. ಸೋಮವಾರ ಸಿಡ್ನಿಯಲ್ಲಿ ಕೊನೆಗೊಂಡ 3ನೇ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳಲು ನೆರವಾಗಿದ್ದ ಹನುಮ ವಿಹಾರಿಗೆ ಮಂಡಿರಜ್ಜು ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರು ಇನ್ನೂ ಕೆಲವು ಸಮಯ ಸಕ್ರಿಯ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ.

ಪಂದ್ಯ ಕೊನೆಗೊಂಡ ಬಳಿಕ ವಿಹಾರಿ ಸ್ಕ್ಯಾನಿಂಗ್ ಗೆ ಒಳಗಾದರು. ಸೋಮವಾರ ಸಂಜೆ ಅಥವಾ ಮಂಗಳವಾರ ಬೆಳಗ್ಗೆ ವರದಿ ಬರುವ ನಿರೀಕ್ಷೆ ಇದೆ.

ಇನ್ನು ಮೂರು ದಿನಗಳಲ್ಲಿ ಆರಂಭವಾಗಲಿರುವ 4ನೇ ಪಂದ್ಯದ ವೇಳೆಗೆ ವಿಹಾರಿ ಫಿಟ್ ಆಗಿರುವ ಸಾಧ್ಯತೆ ಇಲ್ಲ. ಅವರು ಚೇತರಿಸಿಕೊಳ್ಳಲು ಕನಿಷ್ಠ 4 ವಾರಗಳ ಅಗತ್ಯವಿದೆ. ಅವರು ಬ್ರಿಸ್ಬೇನ್ ನಲ್ಲಿ ನಡೆಯುವ ಟೆಸ್ಟ್ ಮಾತ್ರವಲ್ಲ ಸ್ವದೇಶದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ದೃಢಪಡಿಸಿವೆ.  

ಸೋಮವಾರ 161 ಎಸೆತಗಳಲ್ಲಿ ಔಟಾಗದೆ 23 ರನ್ ಗಳಿಸಿದ್ದ ಆಂದ್ರದ ಆಟಗಾರ ವಿಹಾರಿ ಸಹ ಆಟಗಾರ ಆರ್. ಅಶ್ವಿನ್ ಜೊತೆಗೂಡಿ 6ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 62 ರನ್ ಸೇರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News