ಸೈನಾ ನೆಹ್ವಾಲ್‌, ಎಚ್.ಎಸ್‌ ಪ್ರಣೋಯ್‌ ಗೆ ಕೋವಿಡ್‌ ಪಾಸಿಟಿವ್:‌ ಬ್ಯಾಂಕಾಕ್ ಆಸ್ಪತ್ರೆಗೆ ದಾಖಲು

Update: 2021-01-12 06:35 GMT

ಹೈದರಾಬಾದ್‌,ಜ.12: ಬ್ಯಾಡ್ಮಿಂಟನ್‌ ಸರಣಿಗೆಂದು ಬ್ಯಾಂಕಾಕ್‌ ಗೆ ಬಂದಿಳಿದಿದ್ದ ಖ್ಯಾತ ಭಾರತೀಯ ಬ್ಯಾಡ್ಮಿಂಟನ್‌ ಪಟುಗಳಾದ ಸೈನಾ ನೆಹ್ವಾಲ್‌ ಮತ್ತು ಎಚ್.ಎಸ್‌ ಪ್ರಣೋಯ್‌ ಕೋವಿಡ್‌ ಸೋಂಕಿಗೆ ತುತ್ತಾಗಿದ್ದು, ಸದ್ಯ ನಿಯಮ ಪ್ರಕಾರ ಬ್ಯಾಂಕಾಕ್‌ ನ ಆಸ್ಪತ್ರೆಯೊಂದರಲ್ಲಿ ಹತ್ತು ದಿನಗಳ ಕ್ವಾರಂಟೈನ್‌ ಗಾಗಿ ದಾಖಲಾಗಿದ್ದಾರೆ ಎಂದು timesofindia.com ವರದಿ ಮಾಡಿದೆ.

ಸೈನಾರನ್ನು ಈಗಾಗಲೇ ಪಂದ್ಯಾವಳಿಯಿಂದ ಕೈಬಿಡಲಾಗಿದ್ದು, ಜೊತೆಗೆ ಅವರ ಪತಿ ಪಾರುಪಳ್ಳಿ ಕಶ್ಯಪ್‌ ರನ್ನೂ ಪಂದ್ಯಾವಳಿಯಿಂದ ಹೊರಗಿಡಲಾಗಿದೆ ಎಂದು ವರದಿ ತಿಳಿಸಿದೆ. ಕಶ್ಯಪ್‌ ರ ವರದಿಯು ಇನ್ನೂ ದೊರಕಲಿಲ್ಲವಾದರೂ ಸೈನಾ ನೆಹ್ವಾಲ್ ರ ಜೊತೆಗಿದ್ದ ಕಾರಣ ಅವರಿಗೂ ಸೋಂಕು ಹರಡಿರುವ ಸಾಧ್ಯತೆಗಳಿವೆ ಎಂದು ಟೂರ್ನಿಯಿಂದ ಹೊರಗಿಡಲಾಗಿದೆ ಎಂದು ವರದಿ ತಿಳಿಸಿದೆ.

ಸದ್ಯ ತಾಯ್ಲಾಂಡ್‌ ನ ನಿಯಮ ಪ್ರಕಾರ ಸೈನಾ ನೆಹ್ವಾಲ್‌ ಹಾಗೂ ಎಚ್.ಎಸ್‌ ಪ್ರಣೋಯ್‌ ಆಸ್ಪತ್ರೆಗೆ ದಾಖಲಾಗಿ 10 ದಿನಗಳ ಕ್ವಾರಂಟೈನ್‌ ಗೆ ಒಳಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News