ಟೆಸ್ಟ್ ರ್‍ಯಾಂಕಿಂಗ್: ದ್ವಿತೀಯ ಸ್ಥಾನ ಕಳೆದುಕೊಂಡ ಕೊಹ್ಲಿ

Update: 2021-01-12 11:30 GMT

ದುಬೈ: ಐಸಿಸಿಯ ಟೆಸ್ಟ್ ಬ್ಯಾಟ್ಸ್ ಮನ್ ರ್‍ಯಾಂಕಿಂಗ್ ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೊಹ್ಲಿ ಅವರಿದ್ದ 2ನೇ ಸ್ಥಾನವು ಆಸ್ಟ್ರೇಲಿಯದ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಪಾಲಾಯಿತು. ಮಧ್ಯಮ ಕ್ರಮಾಂಕದ ದಾಂಡಿಗ ಚೇತೇಶ್ವರ ಪೂಜಾರ ಎರಡು ಸ್ಥಾನ ಭಡ್ತಿ ಪಡೆದು 8ನೇ ಸ್ಥಾನಕ್ಕೇರಿದರು.

ಮಂಗಳವಾರ ಬಿಡುಗಡೆಯಾಗಿರುವ ರ್ಯಾಂಕಿಂಗ್ ನಲ್ಲಿ ಕೊಹ್ಲಿ 870 ಅಂಕ ಗಳಿಸಿದ್ದಾರೆ. ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಿದ ಬಳಿಕ ಕೊಹ್ಲಿ ಸ್ವದೇಶಕ್ಕೆ ವಾಪಸಾಗಿದ್ದಾರೆ.ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೆ ಸೋಮವಾರ ಹೆಣ್ಣು ಮಗು ಜನಿಸಿತ್ತು.

ಸ್ಮಿತ್(900 ಅಂಕ) 2ನೇ ಸ್ಥಾನಕ್ಕೇರಿದ್ದಾರೆ. ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ (919)ಮೊದಲ ಸ್ಥಾನದಲ್ಲಿದ್ದಾರೆ. ಸ್ಮಿತ್ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 131 ಹಾಗೂ 81 ರನ್ ಗಳಿಸಿದ್ದರು.

ಪಾಕಿಸ್ತಾನ ವಿರುದ್ಧ ಇತ್ತೀಚೆಗೆ 2ನೇ ಟೆಸ್ಟ್ ನಲ್ಲಿ 238 ರನ್ ಗಳಿಸಿದ್ದ ವಿಲಿಯಮ್ಸನ್ ಶ್ರೇಷ್ಟ ರೇಟಿಂಗ್ ಪಾಯಿಂಟ್ಸ್ ಪಡೆದಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

3ನೇ ಪಂದ್ಯದಲ್ಲಿ 50,77 ರನ್ ಗಳಿಸಿದ್ದ ಪೂಜಾರ 8ನೇ ಸ್ಥಾನದಲ್ಲಿದ್ದಾರೆ. ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಒಂದು ಸ್ಥಾನ ಕಳದುಕೊಂಡಿದ್ದಾರೆ. 36 ಹಾಗೂ 97 ರನ ಗಳಿಸಿದ್ದ ರಿಷಭ್ ಪಂತ್ 19 ಸ್ಥಾನ ಭಡ್ತಿ ಪಡೆದು 26ನೇ ರ್ಯಾಂಕ್ ಪಡೆದಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News