ಭಾರತೀಯ ತಂಡ,ಮುಹಮ್ಮದ್ ಸಿರಾಜ್ ರೊಂದಿಗೆ ಕ್ಷಮೆ ಯಾಚಿಸುತ್ತಿದ್ದೇನೆ: ಡೇವಿಡ್ ವಾರ್ನರ್

Update: 2021-01-12 11:29 GMT

ಸಿಡ್ನಿ,ಜ.12:  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಾಟದ ವೇಳೆ ಇಬ್ಬರು ಭಾರತೀಯ ಕ್ರಿಕೆಟಿಗರ ಜನಾಂಗೀಯ ನಿಂದನೆಯನ್ನು ಇಂದು ಆಸ್ಟ್ರೇಲಿಯಾ ಬ್ಯಾಟ್ಸ್‌ ಮೆನ್ ಡೇವಿಡ್ ವಾರ್ನರ್ ಬಲವಾಗಿ ಖಂಡಿಸಿದ್ದಾರೆ ಹಾಗೂ ಪ್ರೇಕ್ಷಕರಿಂದ ಇಂತಹ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

"ಭಾರತೀಯ ತಂಡ ಹಾಗೂ ಮುಹಮ್ಮದ್ ಸಿರಾಜ್ ಅವರಿಂದ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ಈ ರೀತಿಯ ಜನಾಂಗೀಯ ನಿಂದನೆ ಯಾವುದೇ ರೀತಿಯಲ್ಲಿ ಸ್ವೀಕಾರಾರ್ಹವಲ್ಲ ಹಾಗೂ ಯಾವುದೇ ಸಂದರ್ಭದಲ್ಲಿ ಸಹಿಸಲು ಸಾಧ್ಯವಿಲ್ಲ. ನಮ್ಮ ತಾಯ್ನಾಡಿನ ಪ್ರೇಕ್ಷಕರಿಂದ ಉತ್ತಮ ವರ್ತನೆ ನಿರೀಕ್ಷಿಸುತ್ತೇನೆ" ಎಂದು ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ವಾರ್ನರ್ ಬರೆದಿದ್ದಾರೆ.‌

ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳ ನಡುವೆ ನಡೆದ ಮೂರನೇ ಟೆಸ್ಟ್‌ ಪಂದ್ಯಾಟದ ಸಂದರ್ಭದಲ್ಲಿ, ಮುಹಮ್ಮದ್‌ ಸಿರಾಜ್‌ ರನ್ನು ಪ್ರೇಕ್ಷಕರು ‌ʼಬ್ರೌನ್‌ ಡಾಗ್ʼ‌ ಹಾಗೂ ʼಬಿಗ್‌ ಮಂಕಿʼ ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದರು. ಈ ಕುರಿತಾದಂತೆ ಅಲ್ಲಿನ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News