ಜನಾಂಗೀಯ ನಿಂದನೆ ವಿರುದ್ಧ ಸಿರಾಜ್ ಕೈಗೊಂಡ ಕ್ರಮವನ್ನು ಶ್ಲಾಘಿಸಿದ ನಥನ್ ಲಿಯಾನ್

Update: 2021-01-13 12:32 GMT

ಸಿಡ್ನಿ,ಜ.13: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್‍ನಲ್ಲಿ ನಡೆಯುತ್ತಿದ್ದಾಗ ಪ್ರೇಕ್ಷಕರಲ್ಲಿ ಕೆಲವರು ಜನಾಂಗೀಯ ನಿಂದನೆಗೈದಾಗ ಅದರ ಕುರಿತು ತಕ್ಷಣ ಅಂಪೈರ್‍ಗೆ ದೂರಿದ ಭಾರತೀಯ ಬೌಲರ್ ಮೊಹಮ್ಮದ್ ಸಿರಾಜ್ ಕ್ರಮವನ್ನು ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಥನ್ ಲಿಯಾನ್ ಅವರು  ಶ್ಲಾಘಿಸಿದ್ದಾರೆ.

"ಸಿರಾಜ್ ಅವರು ದೂರು ನೀಡಲು ಕೈಗೊಂಡ ನಿರ್ಧಾರ ಇತರರಿಗೂ ಅಂತೆಯೇ ಮಾಡಲು ಉತ್ತೇಜಿಸಬಹುದು. ಆದರೆ  ಅದು ಆಟಗಾರನಿಗೆ ಬಿಟ್ಟಿದ್ದು ಹಾಗೂ ಅವರು ಎಷ್ಟರ ಮಟ್ಟಿಗೆ ಬಾಧಿತರಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ. ಇಡೀ ಜಗತ್ತೆಂಬ ಸಮಾಜದಲ್ಲಿ ಜನರು ಬಂದು ನಾವು ಕ್ರಿಕೆಟ್ ಆಟ ಆಡುವುದನ್ನು ನೋಡಬೇಕು ಆದರೆ ಕ್ರಿಕೆಟಿಗರು ಆಟಕ್ಕೆ ತೆರಳಿ ಜನಾಂಗೀಯ ನಿಂದನೆಗೊಳಗಾಬಾರದು," ಎಂದು ಹೇಳಿರುವ ನಥನ್ ತಾವು ಕೂಡ ಈ ಹಿಂದೆ ಹಲವಾರು ಬಾರಿ ನಿಂದನೆಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.

"ಜನಾಂಗೀಯ ನಿಂದನೆ ಅಸಹ್ಯಕರ ಹಾಗೂ ಅದನ್ನು ನಿಷೇಧಿಸಬೇಕು ಹಾಗೂ ಕ್ರಿಕೆಟ್ ಅಂಗಣದಲ್ಲಿ ಈ ರೀತಿ ಮಾಡಿದವರಿಗೆ ಶಿಕ್ಷೆಯಾಗಬೇಕು' ಎಂದು ಭಾರತೀಯ ತಂಡದ ಕೆಲ ಆಟಗಾರರ ವಿರುದ್ಧ ಕೆಲವರು ಮಾಡಿದ ಜನಾಂಗೀಯ ನಿಂದನೆ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

"ಈ ರೀತಿಯ ನಿಂದನೆಗೆ ಆಸ್ಪದವಿಲ್ಲ, ಜನರು ತಮಾಷೆಗೆ ಹೇಳಿದರೂ ಅದು ಬೇರೆಯವರನ್ನು ವಿವಿಧ ರೀತಿಯಲ್ಲಿ ಬಾಧಿಸಬಹುದು" ಎಂದು ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News