×
Ad

ಇಂಡೋನೇಶ್ಯ: 45,500 ವರ್ಷ ಹಿಂದಿನ ಗುಹಾಚಿತ್ರ ಪತ್ತೆ

Update: 2021-01-14 22:10 IST
ಫೋಟೊ ಕೃಪೆ; twitter.com

ವಾಶಿಂಗ್ಟನ್, ಜ. 14: ಪುರಾತತ್ವಶಾಸ್ತ್ರಜ್ಞರು ಜಗತ್ತಿನ ಬಲ್ಲ ಅತಿ ಪುರಾತನ ಗುಹಾಚಿತ್ರವೊಂದನ್ನು ಪತ್ತೆಹಚ್ಚಿದ್ದಾರೆ. ಕಾಡು ಹಂದಿಯ ನೈಜ ಗಾತ್ರದ ಈ ಚಿತ್ರವನ್ನು ಇಂಡೋನೇಶ್ಯದಲ್ಲಿ ಕನಿಷ್ಠ 45,500 ವರ್ಷಗಳ ಹಿಂದೆ ಬಿಡಿಸಲಾಗಿದೆ ಎಂದು ಭಾವಿಸಲಾಗಿದೆ.

‘ಸಯನ್ಸ್ ಅಡ್ವಾನ್ಸಸ್’ ಪತ್ರಿಕೆಯ ಬುಧವಾರದ ಸಂಚಿಕೆಯಲ್ಲಿ ಇದಕ್ಕೆ ಸಂಬಂಧಿಸಿದ ವರದಿ ಪ್ರಕಟಗೊಂಡಿದೆ. ಈ ವಲಯದಲ್ಲಿ ಆ ಕಾಲ ಘಟ್ಟದಲ್ಲಿ ಮಾನವರು ವಾಸಿಸಿರುವುದಕ್ಕೆ ಇದು ಪುರಾವೆಯಾಗಿದೆ.

ಇಂಡೋನೇಶ್ಯದ ಸುಲವೆಸಿ ದ್ವೀಪದಲ್ಲಿ 2017ರಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಬಸ್ರಾನ್ ಬುರ್ಹಾನ್ ಎಂಬವರು ಈ ಚಿತ್ರವನ್ನು ಪತ್ತೆಹಚ್ಚಿದ್ದಾರೆ ಎಂದು ವರದಿಯ ಸಹ ಲೇಖಕ ಆಸ್ಟ್ರೇಲಿಯದ ಗ್ರಿಫಿತ್ ವಿಶ್ವವಿದ್ಯಾನಿಲಯದ ಮ್ಯಾಕ್ಸಿಮ್ ಆಬರ್ಟ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ವಿದ್ಯಾರ್ಥಿಗಳ ತಂಡವೊಂದು ಸಂಶೋಧನೆ ನಡೆಸುತ್ತಿದ್ದಾಗ ದುರ್ಗಮ ಜಲ್ಲಿ ಕಲ್ಲು ಬೆಟ್ಟವೊಂದರಲ್ಲಿ ಈ ಗುಹಾಚಿತ್ರ ಪತ್ತೆಯಾಗಿದೆ. ವಿಶೇಷ ಗುಣದ ಕೆಂಪು ಮಣ್ಣಿನಲ್ಲಿ ಈ ಚಿತ್ರವನ್ನು ಬಿಡಿಸಲಾಗಿದೆ.

‘‘ಈ ಚಿತ್ರದ ಕಾಲವು ಕನಿಷ್ಠ 45,500 ವರ್ಷ ಹಿಂದಿನದ್ದಾಗಿದೆ. ಆದರೆ, ಅದು ಅದಕ್ಕಿಂತಲೂ ತುಂಬಾ ಹಿಂದಿನದ್ದಾಗಿರುವ ಸಾಧ್ಯತೆಯಿದೆ’’ ಎಂದು ಆಬರ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News