ನಾಲ್ಕನೇ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯ 274/5

Update: 2021-01-15 08:13 GMT

ಬ್ರಿಸ್ಬೇನ್: ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಲ್ಯಾಬುಶೇನ್ ಆಕರ್ಷಕ ಶತಕ(108, 204 ಎಸೆತ, 9 ಬೌಂಡರಿ)ನೆರವಿನಿಂದ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಂತ್ಯಕ್ಕೆ 87 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 274 ರನ್ ಗಳಿಸಿತ್ತು.
ಚೊಚ್ಚಲ ಪಂದ್ಯ ಆಡಿದ ಟಿ.ನಟರಾಜನ್ 20 ಓವರ್ ಗಳಲ್ಲಿ 2 ಮೇಡನ್ ಓವರ್ ಸಹಿತ 63 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಮುಹಮ್ಮದ್ ಸಿರಾಜ್(1-51), ಶಾರ್ದೂಲ್ ಠಾಕೂರ್ (1-67), ಸುಂದರ್(1-63) ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ 35ನೇ ಓವರ್ ನಲ್ಲಿ 87 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ತಂಡವನ್ನು ಆಧರಿಸಿದ ಲ್ಯಾಬುಶೇನ್ ಹಾಗೂ ಮ್ಯಾಥ್ಯೂ ವೇಡ್ 4ನೇ ವಿಕೆಟ್‍ಗೆ 113 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ದಿನದಾಟದಂತ್ಯಕ್ಕೆ ಕ್ಯಾಮರೊನ್ ಗ್ರೀನ್ (28)ಹಾಗೂ ಟಿಮ್ ಪೈನ್(38)ಕ್ರೀಸ್ ಕಾಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News