ಪಾಕ್ ಉಗ್ರ ಗುಂಪುಗಳ ಮೇಲಿನ ನಿಷೇಧ ಮುಂದುವರಿಸಿದ ಅಮೆರಿಕ

Update: 2021-01-16 14:30 GMT

ವಾಶಿಂಗ್ಟನ್, ಜ. 16: ಪಾಕಿಸ್ತಾನದ ಲಷ್ಕರೆ-ತಯ್ಯಬ ಮತ್ತು ಲಷ್ಕರಿ ಝಾಂಗ್ವಿ ಸೇರಿದಂತೆ ಹಲವು ಜಾಗತಿಕ ಭಯೋತ್ಪಾದಕ ಸಂಘಟನೆಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಅಮೆರಿಕ ಮುಂದುವರಿಸಿದೆ.

 ಲಷ್ಕರಿ ಝಾಂಗ್ವಿ ಮತ್ತು ಐಸಿಲ್ ಸಿನೈ ಪೆನಿನ್ಸುಲ (ಐಸಿಲ್-ಎಸ್‌ಪಿ) ಎಂಬ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ವಿವರಗಳನ್ನು ಪರಿಷ್ಕರಿಸಲಾಗಿದ್ದು, ಅವುಗಳ ಹೆಚ್ಚುವರಿ ಹೆಸರುಗಳನ್ನು ನಮೂದಿಸಲಾಗಿದೆ.

ಅಮೆರಿಕದ ವಿದೇಶ ಇಲಾಖೆಯು ಲಷ್ಕರಿ ಝಾಂಗ್ವಿ, ಐಸಿಲ್-ಎಸ್‌ಪಿ, ಲಷ್ಕರೆ ತಯ್ಯಬ, ಜೈಶ್ ರಿಜಲ್ ಅಲ್-ತಾರಿಖ್ ಅಲ್ ನಕ್ಶಬಂದಿ, ಜಮಾಅತು ಅನ್ಸಾರುಲ್ ಮುಸ್ಲಿಮೀನ ಫಿ ಬಿಲಾದಿಸ್-ಸುಡಾನ್, ಅಲ್-ನುಸ್ರಾ ಫ್ರಂಟ್, ಕಂಟಿನ್ಯೂಯಿಟಿ ಐರಿಶ್ ರಿಪಬ್ಲಿಕನ್ ಆರ್ಮಿ ಮತ್ತು ನ್ಯಾಶನಲ್ ಲಿಬರೇಶನ್ ಆರ್ಮಿಗಳ ಭಯೋತ್ಪಾದಕ ಸ್ಥಾನಮಾನವನ್ನು ಪರಿಶೀಲಿಸಿದ ಬಳಿಕ ಅವುಗಳ ಮೇಲಿನ ನಿಷೇಧವನ್ನು ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News