ಮೊದಲ ಬಾರಿಗೆ ಅತ್ಯಂತ ಅಪಾಯಕಾರಿ ಕೆ2 ಶಿಖರವನ್ನು ಹತ್ತಿದ ಶಿರ್ಪಾಗಳು

Update: 2021-01-16 18:09 GMT

 ಕಠ್ಮಂಡು (ನೇಪಾಳ), ಜ. 16: ಹತ್ತು ನೇಪಾಳಿ ಶೆರ್ಪಾಗಳ ಗುಂಪೊಂದು ಜಗತ್ತಿನ ಎರಡನೇ ಅತಿ ಎತ್ತರದ ಹಾಗೂ ಅತ್ಯಂತ ಅಪಾಯಕಾರಿ ಶಿಖರವೆನ್ನಲಾದ ‘ಮೌಂಟ್ ಕೆ2’ ಶಿಖರವನ್ನು ಚಳಿಗಾಲದಲ್ಲಿ ಮೊದಲ ಬಾರಿಗೆ ಏರಿದ್ದಾರೆ.

 8,000 ಮೀಟರ್‌ಗಿಂತ ಹೆಚ್ಚಿನ ಎತ್ತರದ ಜಗತ್ತಿನ 14 ಶಿಖರಗಳ ಪೈಕಿ ಒಂದಾಗಿರುವ ‘ಕೆ2’ ಶಿಖರವನ್ನು ಚಳಿಗಾಲದಲ್ಲಿ ಏರಲು ಈವರೆಗೆ ಯಾರಿಗೂ ಸಾಧ್ಯವಾಗಿರಲಿಲ್ಲ. ಅತಿ ಶೀತಲ ವಾತಾವರಣ, ಬಿರುಗಾಳಿ ಮತ್ತು ಕನಿಷ್ಠ ಒತ್ತಡ ಮುಂತಾದ ಪ್ರತಿಕೂಲ ಹವಾಮಾನವೇ ಇದಕ್ಕೆ ಕಾರಣವಾಗಿತ್ತು.

ಶನಿವಾರ ಸ್ಥಳೀಯ ಸಮಯ 5 ಗಂಟೆಗೆ 8,611 ಮೀಟರ್ ಎತ್ತರದ ಕೆ2 ಶಿಖರವನ್ನು ಏರಲಾಗಿದೆ ಎಂದು ನೇಪಾಲದ ಸೆವೆನ್ ಸಮಿಟ್ಸ್ ಟ್ರೆಕ್ಸ್ (ಎಸ್‌ಎಸ್‌ಟಿ) ಏರ್ಪಡಿಸಿದ ಪರ್ವತಾರೋಹಣ ತಂಡದ ನಾಯಕ ಛಾಂಗ್ ಡಾವ ಶೆರ್ಪಾ ಶನಿವಾರ ಸಂಜೆ ಫೇಸ್‌ಬುಕ್‌ನಲ್ಲಿ ಘೋಷಿಸಿದರು.

ಕಡಿದಾದ ಹಾದಿ, ದುರ್ಬಲ ಬಂಡೆಗಳು ಮತ್ತು ಅನಿಶ್ಚಿತ ಹವಾಮಾನದಿಂದಾಗಿ ಕೆ2 ಶಿಖರಾರೋಹಣವು ಅತ್ಯಂತ ಅಪಾಯಕಾರಿ ಸಾಹಸವಾಗಿದೆ.

8,849 ಮೀಟರ್ ಎತ್ತರದ ವೌಂಟ್ ಎವರೆಸ್ಟ್ ಜಗತ್ತಿನ ಅತ್ಯಂತ ಎತ್ತರದ ಶಿಖರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News