ಬ್ರಿಸ್ಬೇನ್ ಟೆಸ್ಟ್: 7ನೇ ವಿಕೆಟ್ ಗೆ ದಾಖಲೆಯ ಜೊತೆಯಾಟ ನಡೆಸಿದ ಸುಂದರ್-ಶಾರ್ದೂಲ್

Update: 2021-01-17 06:55 GMT

ಬ್ರಿಸ್ಬೇನ್: ಆಸ್ಟ್ರೇಲಿಯ ವಿರುದ್ಧ ಇಲ್ಲಿನ ಗಾಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನಲ್ಲಿ ಭಾರತವು 186 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡದ ನೆರವಿಗೆ ಧಾವಿಸಿರುವ ಭಾರತದ ಕೆಳ ಕ್ರಮಾಂಕದ ಆಟಗಾರರಾದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ 7ನೇ ವಿಕೆಟ್ ಗೆ ಹೊಸ ದಾಖಲೆಯ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಚೊಚ್ಚಲ ಪಂದ್ಯವನ್ನಾಡುತ್ತಿರುವ ಸುಂದರ್ ಹಾಗೂ ಎರಡನೇ ಪಂದ್ಯವನ್ನಾಡುತ್ತಿರುವ ಶಾರ್ದೂಲ್ ಅವರು ಮೂರನೇ ದಿನವಾದ ರವಿವಾರ 123  ರನ್ ಜೊತೆಯಾಟ ನಡೆಸಿದರು. ಈ ಇಬ್ಬರು 7ನೇ ವಿಕೆಟಿಗೆ 59ರನ್ ಜೊತೆಯಾಟ ಪೂರೈಸಿದ ಬೆನ್ನಿಗೆ ಗಾಬಾ ಸ್ಟೇಡಿಯಂನಲ್ಲಿ 7ನೇ ವಿಕೆಟ್ ಗೆ ಗರಿಷ್ಠ ಜೊತೆಯಾಟ ನಡೆಸಿದ್ದ ಕಪಿಲ್ ದೇವ್ ಹಾಗೂ ಮನೋಜ್ ಪ್ರಭಾಕರ್ ಅವರ ಹೆಸರಲ್ಲಿದ್ದ 30 ವರ್ಷ ಹಳೆಯ ದಾಖಲೆಯನ್ನು ಮುರಿದರು.

ಅರ್ಧಶತಕ ಗಳಿಸಿ 123 ರನ್ ಜೊತೆಯಾಟ ನಡೆಸಿದ್ದ ಸುಂದರ್(62)-ಶಾರ್ದೂಲ್(67) ಅವರನ್ನು ಪ್ಯಾಟ್ ಕಮಿನ್ಸ್ ಬೇರ್ಪಡಿಸಿದರು.
ಈಗ ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಗಾಬಾದಲ್ಲಿ ಭಾರತ ಆಡುತ್ತಿರುವ 7ನೇ ಟೆಸ್ಟ್ ಪಂದ್ಯವಾಗಿದೆ. ಭಾರತ ಈ ಮೈದಾನದಲ್ಲಿ 1ರಲ್ಲಿ ಡ್ರಾ ಹಾಗೂ 5ರಲ್ಲಿ ಸೋತಿದೆ.

ಗಾಬಾದಲ್ಲಿ ಭಾರತ-ಆಸ್ಟ್ರೇಲಿಯ ನಡುವೆ 7ನೇ ವಿಕೆಟ್‍ಗೆ ನಡೆದಿರುವ ಗರಿಷ್ಠ ಜೊತೆಯಾಟ

ಸುಂದರ್-ಶಾರ್ದೂಲ್ ಠಾಕೂರ್ 123(2021)
ಕಪಿಲ್ ದೇವ್-ಮನೋಜ್ ಪ್ರಭಾಕರ್ 58(1991)
ಎಂಎಸ್ ಧೋನಿ-ಆರ್.ಅಶ್ವಿನ್ 57(2014)
ಮನೋಜ್ ಪ್ರಭಾಕರ-ರವಿ ಶಾಸ್ತ್ರಿ 49(1991)
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News