ನಾಲ್ಕನೇ ಟೆಸ್ಟ್: ಭಾರತ 336 ರನ್ ಗೆ ಆಲೌಟ್

Update: 2021-01-17 07:15 GMT

ಬ್ರಿಸ್ಬೇನ್: ಕೆಳ ಕ್ರಮಾಂಕದ ಆಟಗಾರರಾದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಆಕರ್ಷಕ ಅರ್ಧಶತಕದೊಂದಿಗೆ 7ನೇ ವಿಕೆಟ್ ಗೆ ನಡೆಸಿದ ಹೊಸ ದಾಖಲೆಯ ಜೊತೆಯಾಟದ ನೆರವಿನಿಂದ ಚೇತರಿಸಿಕೊಂಡ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ 336 ರನ್ ಗಳಿಸಿ ಆಲೌಟಾಗಿದೆ. ಆಸ್ಟ್ರೇಲಿಯವು ಮೊದಲ  ಇನಿಂಗ್ಸ್ ನಲ್ಲಿ 33 ರನ್ ಗಳ ಅಲ್ಪ ಮುನ್ನಡೆ ಪಡೆದಿದೆ.

3ನೇ ದಿನದಾಟವಾದ ರವಿವಾರ ಭಾರತ 2 ವಿಕೆಟ್ ನಷ್ಟಕ್ಕೆ 62 ರನ್‍ನಿಂದ ಮೊದಲ ಇನಿಂಗ್ಸ್‍ ಮುಂದುವರಿಸಿತು. ನಾಯಕ ಅಜಿಂಕ್ಯ ರಹಾನೆ(37), ಚೇತೇಶ್ವರ ಪೂಜಾರ(25), ಮಯಾಂಕ್ ಅಗರ್ವಾಲ್(38) ಹಾಗೂ ರಿಷಭ್ ಪಂತ್ ಅವರು ಹೇಝಲ್ ವುಡ್ ದಾಳಿಗೆ ತತ್ತರಿಸಿದರು. ಭಾರತ 186 ರನ್ ಗೆ 6 ವಿಕೆಟ್ ಗಳನ್ನು ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಆಲೌಟಾಗುವ ಭೀತಿಯಲ್ಲಿತ್ತು. ಆಗ ತಂಡವನ್ನು ಆಧರಿಸಿದ ವಾಷಿಂಗ್ಟನ್ ಸುಂದರ್(62,144 ಎಸೆತ, 7 ಬೌಂ.1 ಸಿ.)ಹಾಗೂ ಶಾರ್ದೂಲ್ ಠಾಕೂರ್ (67,115 ಎಸೆತ, 9 ಬೌಂ.2 ಸಿ.)7 ನೇ ವಿಕೆಟ್ ಗೆ ನಿರ್ಣಾಯಕ ಜೊತೆಯಾಟ(123) ನಡೆಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಆಸೀಸ್ ಪರವಾಗಿ ಹೇಝಲ್ ವುಡ್(5-57) ಐದು ವಿಕೆಟ್ ಗೊಂಚಲು ಪಡೆದರು. ಸ್ಟಾಕ್ ್(2-88) ಹಾಗೂ ಕಮಿನ್ಸ್(2-94)ತಲಾ ಎರಡು ವಿಕೆಟ್ ಪಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News