ನಾಲ್ಕನೇ ಟೆಸ್ಟ್: ಭಾರತಕ್ಕೆ 328 ರನ್ ಗುರಿ

Update: 2021-01-18 08:25 GMT

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ ಭಾರತದ ಗೆಲುವಿಗೆ 328 ರನ್ ಗುರಿ ನಿಗದಿಪಡಿಸಿದೆ.

ವಿಕೆಟ್ ನಷ್ಟವಿಲ್ಲದೆ 21 ರನ್ ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ 294 ರನ್ ಗಳಿಸಿ ಆಲೌಟಾಯಿತು. ಮುಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಸಂಘಟಿತ ದಾಳಿ ಸಂಘಟಿಸಿ ಆಸ್ಟ್ರೇಲಿಯವನ್ನು 2ನೇ ಇನಿಂಗ್ಸ್ ನಲ್ಲಿ 300 ರನ್ ನೊಳಗೆ ನಿಯಂತ್ರಿಸಿದರು. ಮೊದಲ ಇನಿಂಗ್ಸ್ ನಲ್ಲಿ 33 ರನ್ ಮುನ್ನಡೆ ಪಡೆದಿದ್ದ ಆಸೀಸ್, ಅಜಿಂಕ್ಯ ರಹಾನೆ ಬಳಗಕ್ಕೆ 328 ರನ್ ಗುರಿ ನೀಡಿದೆ.

ಗೆಲ್ಲಲು ಕಠಿಣ ಬೆನ್ನಟ್ಟಿದ ಭಾರತ ಮಳೆಯಿಂದಾಗಿ ದಿನದಾಟ ಕೊನೆಗೊಂಡಾಗ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ.

ಆಸ್ಟ್ರೇಲಿಯದ ಪರ ಸ್ಟೀವನ್ ಸ್ಮಿತ್ 55 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಭಾರತದ ಪರ ಮುಹಮ್ಮದ್ ಸಿರಾಜ್(5-73) ಹಾಗೂ ಶಾರ್ದೂಲ್ ಠಾಕೂರ್ (4-61) 9 ವಿಕೆಟ್ ಗಳನ್ನು ಹಂಚಿಕೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News