ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ಗಳಿಸಿದ ಭಾರತ

Update: 2021-01-19 08:09 GMT

ಬ್ರಿಸ್ಬೇನ್,ಜ.19: ಆಸ್ಟ್ರೇಲಿಯಾದ ಬ್ರಿಸ್ಬೇನ್ ನ ಗಾಬಾ ಕ್ರೀಡಾಂಗಾಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಟೆಸ್‍ ಪಂದ್ಯಾಟದಲ್ಲಿ ಭಾರತ ತಂಡವು ರೋಮಾಂಚಕ ಮತ್ತು ಐತಿಹಾಸಿಕ ಜಯ ಸಾಧಿಸಿದೆ. ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸುವ ಮೂಲಕ ಭಾರತ ತಂಡವು ಈ ಐತಿಹಾಸಿಕ ಸಾಧನೆಗೈದಿದೆ. 

ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಗಮಿಸಿದ್ದ ರೋಹಿತ್ ಶರ್ಮಾ 7 ರನ್ ಗಳಿಸಿ ಪೆವಿಲಿಯನ್ ಸೇರಿದರೂ, ಶುಭ್ ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ 114 ರನ್ ಗಳ ಜೊತೆಯಾಟ ಆಡಿದರು. ಗೋಡೆಯಂತೆ ಕ್ರೀಸ್ ನಲ್ಲಿ ನಿಂತು ಆಸೀಸ್ ಬೌಲರ್ ಗಳ ಬೆವರಿಳಿಸಿದ ಚೇತೇಶ್ವರ ಪೂಜಾರ 211 ಎಸೆತಗಳಲ್ಲಿ 56 ರನ್ ಗಳಿಸಿದರು. ಶುಭ್ ಮನ್ ಗಿಲ್ 146 ಎಸೆತಗಳಲ್ಲಿ 91 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 22 ರನ್ ಗಳಿಸಿ ನಥನ್‌ ಲಿಯೋನ್‌ ಗೆ ವಿಕೆಟ್‌ ಒಪ್ಪಿಸಿದರು. ಕೊನೆಯ ಕ್ಷಣದಲ್ಲಿ ಅದ್ಭುತ ಪ್ರದರ್ಶನ ತೋರಿದ ರಿಶಭ್‌ ಪಂತ್‌ 138 ಎಸೆತಗಳಲ್ಲಿ 89 ರನ್‌ ಗಳಿಸುವ  ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News