ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಭಾರತ ತಂಡಕ್ಕೆ 5 ಕೋಟಿ ರೂ. ಬೋನಸ್ ಘೋಷಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

Update: 2021-01-19 09:29 GMT

ಬ್ರಿಸ್ಬೇನ್,ಜ.19: ಬ್ರಿಸ್ಬೇನ್ ನ ಗಾಬಾ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೆ ಟೆಸ್ಟ್ ಪಂದ್ಯಾಟದಲ್ಲಿ ಭಾರತ ತಂಡವು ರೋಮಾಂಚನಕಾರಿ ಹಾಗೂ ಐತಿಹಾಸಿಕ ಜಯ ಗಳಿಸಿದೆ. ಕೊನೆಯ ಕ್ಷಣದವರೆಗೂ ಅತ್ತುತ್ತಮ ಪ್ರದರ್ಶನ ತೋರಿದ ರಿಶಭ್ ಪಂತ್ ತಂಡವನ್ನು ಗೆಲುವಿನ ದಡ ಸೇರಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಇದೀಗ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರಗಳಿಂದ ಗೆದ್ದುಕೊಂಡಿರುವ ಭಾರತ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 5 ಕೋಟಿ ರೂ. ಬೋನಸ್ ಪ್ರಕಟಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯ ಮೂಲಕ “ ಭಾರತ ತಂಡದ ಈ ವಿಶೇಷ ಕ್ಷಣದಲ್ಲಿ ಬಿಸಿಸಿಐಯು ತಂಡಕ್ಕೆ ಬೋನಸ್ ರೂಪದಲ್ಲಿ 5 ಕೋಟಿ ರೂ.ಯನ್ನು ಘೋಷಿಸುತ್ತಿದೆ. ಈ ಪಂದ್ಯಾಟದಲ್ಲಿ ಭಾರತ ತಂಡವು ಉತ್ತಮ ಸಾಮರ್ಥ್ಯ ಮತ್ತು ಕೌಶಲ್ಯ ಪ್ರದರ್ಶಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News