ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡದ ಐತಿಹಾಸಿಕ ಸಾಧನೆ: ಹರಿದು ಬಂದ ಶುಭಾಶಯಗಳ ಮಹಾಪೂರ

Update: 2021-01-19 09:28 GMT

ಬ್ರಿಸ್ಬೇನ್‌,ಜ.19: 1988 ರಲ್ಲಿ ಸರ್‌ ವಿವಿಯನ್‌ ರಿಚರ್ಡ್ಸ್‌ ನೇತೃತ್ವದ ವೆಸ್ಟ್‌ ಇಂಡೀಸ್‌ ತಂಡವು ಗಬ್ಬಾದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ಇದೀಗ ಆ ಪಂದ್ಯಾಟ ನಡೆದು 33 ವರ್ಷಗಳ ಬಳಿಕ ಅನನುಭವಿ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ. ಈ ಐತಿಹಾಸಿಕ ಜಯವನ್ನು ದಾಖಲಿಸಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಪ್ರಮುಖರು ಶುಭಾಶಯ ಕೋರಿದ್ದಾರೆ.

" ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ಪಡೆದ ಯಶಸ್ಸು ನಮಗೆಲ್ಲಾ ಸಂತೋಷ ನೀಡಿದೆ. ತಂಡದ ಸಾಮರ್ಥ್ಯಮತ್ತು ಶಕ್ತಿಯು ಸರಣಿಯುದ್ದಕ್ಕೂ ಗೋಚರಿಸಿದೆ. ಭಾರತ ತಂಡಕ್ಕೆ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ" ಎಂದು ನರೇಂದ್ರ ಮೋದಿ ಹಾರೈಸಿದ್ದಾರೆ.

"ಪ್ರತಿಯೊಂದು ಸೀಸನ್‌ ನಲ್ಲೂ ನಾವು ಹೊಸ ನಾಯಕರನ್ನು ಕಂಡು ಹಿಡಿದಿದ್ದೇವೆ. ನಮಗೆ ನೋವಾದಾಗಲೆಲ್ಲಾ ನಾವು ಎತ್ತರಕ್ಕೇರುತ್ತೇವೆ. ನಾವು ಭಯವಿಲ್ಲದ ಆಟವನ್ನು ಆಡುತ್ತೇವೆಯೇ ಹೊರತು ಅಸಡ್ಡೆಯ ಆಟವಲ್ಲ. ಗಾಯಗಳನ್ನು ಮತ್ತು ಅನಿಶ್ಚಿತತೆಗಳನ್ನು ನಾವು ಅಮರ್ಥವಾಗಿ ಎದುರಿಸಿದ್ದೇವೆ. ಇದೊಂದು ಅತ್ಯುತ್ತಮ ಜಯವಾಗಿದೆ. ಭಾರತ ತಂಡಕ್ಕೆ ಅಭಿನಂದನೆಗಳು" ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ.

ಇನ್ನು ಹಲವು ಟ್ವೀಟ್‌ ಗಳು ಇಲ್ಲಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News