ಸ್ಟೀವನ್ ಸ್ಮಿತ್ ರನ್ನು ಕೈಬಿಟ್ಟ ರಾಜಸ್ಥಾನ ರಾಯಲ್ಸ್: ಉದಯೋನ್ಮುಖ ಆಟಗಾರನಿಗೆ ನಾಯಕತ್ವದ ಹೊಣೆ

Update: 2021-01-20 14:48 GMT

ಜೈಪುರ: ರಾಜಸ್ಥಾನ ರಾಯಲ್ಸ್ 2021ರ ಐಪಿಎಲ್ ಗಾಗಿ ನಡೆಯುವ ಆಟಗಾರರ ಹರಾಜಿಗಿಂತ ಮೊದಲು  ನಾಯಕ ಸ್ಟೀವನ್ ಸ್ಮಿತ್ ರನ್ನು ತಂಡದಿಂದ ಕೈಬಿಟ್ಟಿದೆ. ಬುಧವಾರ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ವಿಚಾರವನ್ನು ದೃಢಪಡಿಸಿದೆ. ಸ್ಮಿತ್ ರಿಂದ ತೆರವಾದ ಸ್ಥಾನಕ್ಕೆ ಕೇರಳ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ರನ್ನು ನೇಮಿಸಲಾಗಿದೆ.

2013ರಲ್ಲಿ ರಾಜಸ್ಥಾನ ತಂಡಕ್ಕೆ ಪ್ರವೇಶಿಸಿರುವ ಸ್ಯಾಮ್ಸನ್ 2020ರ ಋತುವಿನಲ್ಲಿ 14 ಇನಿಂಗ್ಸ್ ಗಳಲ್ಲಿ ಒಟ್ಟು 375 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದ್ದರು.

2020ರಲ್ಲಿ ಸ್ಮಿತ್ ಅವರು ರಾಜಸ್ಥಾನ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತ್ತು.

ಆಟಗಾರರ ಹರಾಜಿಗೆ ಮೊದಲು ಆಟಗಾರರನ್ನು ಉಳಿಸಿಕೊಳ್ಳಲು ಜನವರಿ 20 ಕೊನೆಯ ದಿನವಾಗಿತ್ತು. 14ನೇ ಆವೃತ್ತಿಯ ಲೀಗ್ ಗಿಂತ ಮೊದಲು ತಂಡದಿಂದ ಹೊರಗುಳಿಯುತ್ತಿರುವ  ಓರ್ವ ಪ್ರಮುಖ ಬ್ಯಾಟ್ಸ್ ಮನ್ ಸ್ಮಿತ್. ಸ್ಮಿತ್ 2020ರ ಐಪಿಎಲ್ ನಲ್ಲಿ 14 ಪಂದ್ಯಗಳಲ್ಲಿ ಒಟ್ಟು 311 ರನ್ ಗಳಿಸಿದ್ದರು. ಒಟ್ಟಾರೆ ಸ್ಮಿತ್ 95 ಐಪಿಎಲ್ ಪಂದ್ಯಗಳನ್ನು ಆಡಿದ್ದು, 2,333 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 11 ಅರ್ಧಶತಕಗಳಿವೆ.

ಈ ವರ್ಷದ ಐಪಿಎಲ್ ಗೆ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News