×
Ad

2021ರಲ್ಲಿ ಭಾರತವು 11.5 ಶೇಕಡ ಆರ್ಥಿಕ ಬೆಳವಣಿಗೆ ಸಾಧಿಸಲಿದೆ

Update: 2021-01-26 23:48 IST

ನ್ಯೂಯಾರ್ಕ್, ಜ. 26: ಭಾರತವು 2021ರಲ್ಲಿ 11.5 ಶೇಕಡ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿದೆ. ಅದರ ಪ್ರಕಾರ, ಕೊರೋನ ವೈರಸ್ ಸಾಂಕ್ರಾಮಿಕದ ನಡುವೆ ಈ ವರ್ಷ ಎರಡು ಅಂಕಿಗಳ ಬೆಳವಣಿಗೆಯನ್ನು ದಾಖಲಿಸಲಿರುವ ಏಕೈಕ ಪ್ರಮುಖ ದೇಶ ಭಾರತವಾಗಲಿದೆ.

ಭಾರತದ ಆರ್ಥಿಕತೆಯು ಪ್ರಸಕ್ತ ವರ್ಷ ಪುಟಿದೇಳಲಿದೆ ಎಂದು ಮಂಗಳವಾರ ಬಿಡುಗಡೆಗೊಂಡ ವಿಶ್ವ ಆರ್ಥಿಕ ಸಮೀಕ್ಷೆ ತಿಳಿಸಿದೆ.

ಸಾಂಕ್ರಾಮಿಕದಿಂದಾಗಿ ಭಾರತದ ಆರ್ಥಿಕತೆಯು 2020ರಲ್ಲಿ 8 ಶೇಕಡದಷ್ಟು ಕುಸಿದಿದೆ ಎಂದು ಅದು ಈ ಹಿಂದೆ ಹೇಳಿತ್ತು.

8.1 ಶೇಕಡ ಆರ್ಥಿಕ ಬೆಳವಣಿಗೆಯೊಂದಿಗೆ ಚೀನಾವು ಎರಡನೇ ಸ್ಥಾನದಲ್ಲಿದೆ. 5.9 ಶೇಕಡ ಬೆಳವಣಿಗೆಯೊಂದಿಗೆ ಸ್ಪೇನ್ ಮೂರನೇ ಸ್ಥಾನದಲ್ಲಿದ್ದರೆ, 5.5 ಶೇಕಡ ಪ್ರಗತಿಯೊಂದಿಗೆ ಫ್ರಾನ್ಸ್ ನಾಲ್ಕನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News