1.5 ಕೋಟಿ ರೂ.ಗೆ ರಾಜ್ ಕಪೂರ್ ಮನೆ ಮಾರಲು ನಿರಾಕರಣೆ

Update: 2021-01-27 17:59 GMT

ಪೇಶಾವರ (ಪಾಕಿಸ್ತಾನ), ಜ. 27: ಹಿಂದಿ ಸಿನೆಮಾ ರಂಗದ ದಿಗ್ಗಜ ರಾಜ್ ಕಪೂರ್‌ರ ಪೇಶಾವರದಲ್ಲಿರುವ ಪೂರ್ವಜರ ಮನೆಯನ್ನು ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವ ರಾಜ್ಯದ ಸರಕಾರ ನಿಗದಿಪಡಿಸಿರುವ 1.5 ಕೋಟಿ ರೂಪಾಯಿಗೆ ಮಾರಾಟ ಮಾಡಲು ಮನೆಯ ಈಗಿನ ಒಡೆಯ ನಿರಾಕರಿಸಿದ್ದಾರೆ.

ಪ್ರಮುಖ ಸ್ಥಳದಲ್ಲಿರುವ ಈ ಮನೆಗೆ ಅತ್ಯಂತ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ ಎಂದು ಹವೇಲಿಯ ಪ್ರಸಕ್ತ ಒಡೆಯ ಹಾಜಿ ಅಲಿ ಶಬೀರ್ ಬುಧವಾರ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

ರಾಜ್ ಕಪೂರ್ ಗೌರವಾರ್ಥ ಅವರ ಪೂರ್ವಜರ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ಉದ್ದೇಶದಿಂದ, ಮನೆಯನ್ನು ಖರೀದಿಸಲು ಖೈಬರ್ ಪಖ್ತೂನ್‌ಖ್ವ ಸರಕಾರ ಈ ತಿಂಗಳ ಆದಿ ಭಾಗದಲ್ಲಿ 1.5 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ‘‘1.5 ಕೋಟಿ ರೂಪಾಯಿಗೆ ಅರ್ಧ ಮಾರ್ಲ (272.25 ಚದರ ಅಡಿ) ಜಮೀನು ಕೂಡ ಸಿಗುವುದಿಲ್ಲ. 6 ಮಾರ್ಲ ಜಮೀನನ್ನು ನಾನು 1.5 ಕೋಟಿ ರೂಪಾಯಿಗೆ ಹೇಗೆ ಮಾರಾಟ ಮಾಡಲಿ’’ ಎಂದು ಅವರು ಹೇಳಿದರು.

ಈ ಮನೆಯ ನೈಜ ಮೌಲ್ಯ 200 ಕೋಟಿ ರೂಪಾಯಿ ಎಂದು ಶಬೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News