×
Ad

ಟೆಸ್ಟನಲ್ಲಿ 200ನೇ ವಿಕೆಟ್ ಪಡೆದ ಕಾಗಿಸೊ ರಬಾಡ

Update: 2021-01-29 14:37 IST

ಕರಾಚಿ: ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಡಾ ಅವರು ಪಾಕಿಸ್ತಾನ ವಿರುದ್ಧ ಕರಾಚಿಯಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ತಮ್ಮ 200ನೇ ಟೆಸ್ಟ್ ವಿಕೆಟ್ ಪಡೆದಿದ್ದಾರೆ.

 ಟೆಸ್ಟ್‌ನ ಮೂರನೇ ದಿನವಾಗಿರುವ ಗುರುವಾರ ಪಾಕಿಸ್ತಾನದ ಹಸನ್ ಅಲಿ ಅವರನ್ನು 21 ರನ್‌ಗಳಿಗೆ ಔಟ್ ಮಾಡಿರುವ ರಬಡಾ ತಮ್ಮ 44ನೇ ಪಂದ್ಯದಲ್ಲಿ ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.ಅವರು ಪಾಕ್‌ನ 3 ವಿಕೆಟ್ (70ಕ್ಕೆ 3) ಉಡಾಯಿಸಿದ್ದಾರೆ. ರಬಡಾ ಟೆಸ್ಟ್‌ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ದಕ್ಷಿಣ ಆಫಿಕದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ರಬಡಾ 2015ರಲ್ಲಿ ಮೊಹಾಲಿಯಲ್ಲಿ ಭಾರತ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಟೆಸ್ಟ್ ಪಂದ್ಯಗಳಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ದಕ್ಷಿಣ ಆಫ್ರಿಕದ 8ನೇ ಆಟಗಾರ ಎನಿಸಿಕೊಂಡಿದ್ದಾರೆ.

 ಡೇಲ್ ಸ್ಟೇನ್ (439) ಮೊದಲ ಸ್ಥಾನದಲ್ಲಿದ್ದರೆ, ಶಾನ್ ಪೊಲಾಕ್ (421), ಎಂ. ಎಂಟಿನಿ(390), ಅಲನ್ ಡೊನಾಲ್ಡ್ (330), ಮಾರ್ನೆ ಮೊರ್ಕೆಲ್ (390), ಜಾಕ್ ಕಾಲಿಸ್ (291) ಮತ್ತು ವೆರ್ನಾನ್ ಫಿಲ್ಯಾಂಡರ್ (224) ನಂತರದ ಸ್ಥಾನದಲ್ಲಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕ ದಾಖಲಿಸಿರುವ 220 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 378 ರನ್ ಗಳಿಸುವ ಮೂಲಕ 158 ರನ್‌ಗಳ ಮುನ್ನಡೆ ಸಾಧಿಸಿತ್ತು. ಮೂರನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕ ಎರಡನೇ ಇನಿಂಗ್ಸ್‌ನಲ್ಲಿ 75 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 187 ರನ್ ದಾಖಲಿಸಿದೆ. ಏಡೆನ್ ಮರ್ಕರಮ್ 74 ರನ್ ಮತ್ತು ರಸ್ಸೀ ವ್ಯಾನ್ ಡರ್ ಡುಸೆನ್ 64 ರನ್ ಗಳಿಸಿ ಔಟಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News