×
Ad

ಎರಡನೇ ಬಾರಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾದ ಗಂಗುಲಿ

Update: 2021-01-29 14:41 IST

ಕೋಲ್ಕತಾ, : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಎರಡನೇ ಬಾರಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. 48ರ ಹರೆಯದ ಗಂಗುಲಿ ಅವರ ಆರೋಗ್ಯ ಸ್ಥಿರವಾಗಿದೆ, ಎರಡು ಸ್ಟೆಂಟ್‌ಗಳನ್ನು ಸೇರಿಸಲಾಗಿದೆ.

 ಡಾ. ಅಫ್ತಾಬ್ ಖಾನ್ ,ಡಾ.ಅಶ್ವಿನ್ ಮೆಹ್ತಾ, ಡಾ.ದೇವಿ ಶೆಟ್ಟಿ, ಡಾ.ಅಜಿತ್ ದೇಸಾಯಿ, ಡಾ.ಸರೋಜ್ ಮಂಡಲ್ ಮತ್ತು ಡಾ.ಸಪ್ತರ್ಷಿ ಬಸು ಅವರು ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಿದರು. ಲಘು ಹೃದಯಾಘಾತದಿಂದಾಗಿ ಜನವರಿ 2ರಂದು ಗಂಗುಲಿ ಮೊದಲ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು. ಹೃದಯದ ರಕ್ತನಾಳದಲ್ಲಿ ಬ್ಲಾಕ್‌ಗಳು ಕಂಡು ಬಂದ ಹಿನ್ನೆಲೆಯಲ್ಲಿ ಒಂದು ಕಡೆ ಸ್ಟೆಂಟ್ ಅಳವಡಿಸಲಾಗಿತ್ತು. ಒಂದೇ ತಿಂಗಳಲ್ಲಿ ಗಂಗುಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News