ಆಸ್ಟ್ರೇ ಲಿಯದ ಅಂಪೆರ್ ಬ್ರೂಸ್ ನಿವೃತ್ತಿ
Update: 2021-01-29 14:46 IST
ಮೆಲ್ಬೊರ್ನ್ : ಆಸ್ಟ್ರೇಲಿಯದ 60ರ ಹರೆಯದ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಕ್ರಿಕೆಟ್ ಆಟದ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಇದರೊಂದಿಗೆ ಅವರ 15 ವರ್ಷಗಳ ಅಂತರ್‌ರಾಷ್ಟ್ರೀಯ ಅಂಪೈರಿಂಗ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.
62 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವ ಹಿಸಿರುವ ಅವರು ಕೊನೆಯದಾಗಿ ಬ್ರಿಸ್ಬೇನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯ ಮತ್ತು ಭಾರತ ತಂಡದ ನಡುವಿನ ಟೆಸ್ಟ್ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ್ದರು. ಇದು ಅವರ ವೃತ್ತಿ ಬದುಕಿನ ಕೊನೆಯ ಪಂದ್ಯವಾಗಿದೆ. 2007-08ರಲ್ಲಿ ಐಸಿಸಿಯ ಅಂತರ್‌ರಾಷ್ಟ್ರೀಯ ಅಂಪೈರ್‌ಗಳ ತಂಡಕ್ಕೆ ಸೇರ್ಪಡೆ ಯಾದ ಆಕ್ಸೆನ್‌ಫೋರ್ಡ್ ಅವರನ್ನು 2012ರಲ್ಲಿ ಎಲೈಟ್ ಪ್ಯಾನೆಲ್‌ಗೆ ಭಡ್ತಿ ನೀಡಲಾಗಿತ್ತು. ಬ್ರೂಸ್ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆಯಲ್ಲಿ ರಕ್ಷಣೆಗಾಗಿ ಗುರಾಣಿಯನ್ನು ಬಳಸುತ್ತಿದ್ದ ಮೊದಲ ಅಂಪೈರ್ ಆಗಿದ್ದರು.