×
Ad

ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ ಶಾ ನೇಮಕ

Update: 2021-01-30 20:35 IST

ಹೊಸದಿಲ್ಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಕಾರ್ಯದರ್ಶಿ ಜಯ ಶಾ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಅಧ್ಯಕ್ಷರಾಗಿ ಶನಿವಾರ ನೇಮಕಗೊಂಡಿದ್ದಾರೆ.

ಜಯ ಶಾ ಗೃಹ ಸಚಿವ ಅಮಿತ್ ಶಾ ಅವರ ಪುತ್ರರಾಗಿದ್ದಾರೆ.

ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಟ್ವಿಟರ್ ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, "ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಅಧ್ಯಕ್ಷ ಪದವಿ ಸ್ವೀಕರಿಸುತ್ತಿರುವ ಜಯ  ಶಾಗೆ ಅಭಿನಂದನೆಗಳು.  ನಿಮ್ಮ ನಾಯಕತ್ವದಲ್ಲಿ ಎಸಿಸಿ ಹೊಸ ಎತ್ತರಕ್ಕೆ ಏರುವ ದೃಢ ವಿಶ್ವಾಸ ನನಗಿದೆ. ಇದರಿಂದ ಇಡೀ ಏಶ್ಯ ವಲಯದ ಕ್ರಿಕೆಟಿಗರು ಲಾಭ ಪಡೆಯಲಿದ್ದಾರೆ. ನೀವು ಯಶಸ್ವಿಯಾಗಿ ಅಧ್ಯಕ್ಷ ಅವಧಿ ಪೂರೈಸಬೇಕು ಎಂದು ಶುಭ ಕೋರುವೆ''ಎಂದು ಟ್ವೀಟಿಸಿದರು.

ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ(ಬಿಸಿಬಿ)ಅಧ್ಯಕ್ಷ ನಝ್ಮುಲ್ ಹುಸೇನ್ ಎಸಿಸಿ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಇದೀಗ ಜಯ ಶಾ ಎಸಿಸಿ ಅಧ್ಯಕ್ಷ ಸ್ಥಾನವಹಿಸಿಕೊಳ್ಳಲಿದ್ದಾರೆ. ಎಸಿಸಿ ಏಶ್ಯದ ಪ್ರಾದೇಶಿಕ ಆಡಳಿತ ಮಂಡಳಿಯಾಗಿದ್ದು, ಪ್ರಸ್ತುತ 24 ಸದಸ್ಯ ಅಸೋಸಿಯೇಶನ್ ಗಳನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News