ದಾಂಪತ್ಯ ಬದುಕಿಗೆ ಕಾಲಿಟ್ಟ ರಾಜಸ್ಥಾನದ ರಾಯಲ್ಸ್ ವೇಗದ ಬೌಲರ್ ಜಯದೇವ್ ಉನದ್ಕಟ್

Update: 2021-02-03 14:02 GMT

ಅಹಮದಾಬಾದ್: ರಾಜಸ್ಥಾನದ ವೇಗದ ಬೌಲರ್ ಜಯದೇವ್ ಉನದ್ಕಟ್ ಮಂಗಳವಾರ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ.

ರಿನ್ನಿ ಅವರನ್ನು ವಿವಾಹವಾಗಿದ್ದಾಗಿ ಉನದ್ಕಟ್ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದರು.

ತನ್ನ ಪತ್ನಿಯೊಂದಿಗಿದ್ದ ಚಿತ್ರವನ್ನು ಟ್ವೀಟಿಸಿದ ಉನದ್ಕಟ್, ಫೆಬ್ರವರಿ 2ರಂದು ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಈ ಜೋಡಿ ಕಳೆದ ವರ್ಷದ ಮಾರ್ಚ್ 15ರಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಕುಟುಂಬ ಹಾಗೂ ಸ್ನೇಹಿತರ ಉಪಸ್ಥಿತಿಯಲ್ಲಿ ಫೆ.2,2021ರಲ್ಲಿ ನನ್ನವಿವಾಹ ನಡೆದಿದೆ ಎಂಬ ವಿಚಾರ ಹಂಚಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಉನದ್ಕಟ್ ಬರೆದಿದ್ದಾರೆ.

ಉನದ್ಕಟ್ ತನ್ನ ಮದುವೆಯ ಸುದ್ದಿ ಹಂಚಿಕೊಂಡ ತಕ್ಷಣವೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸಂದೇಶಗಳನ್ನು ಕಳುಹಿಸಲು ಆರಂಭಿಸಿದರು.

ಉನದ್ಕಟ್ ಇತ್ತೀಚೆಗೆ ಕೊನೆಗೊಂಡಿದ್ದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆರು ವಿಕೆಟ್ ಗಳನ್ನು ಉರುಳಿಸಿದ್ದರು. ಆದರೆ ಸೌರಾಷ್ಟ್ರ  ತಂಡವನ್ನು ನಾಕೌಟ್  ಗೆ ತಲುಪಿಸಲು ವಿಫಲರಾಗಿದ್ದಾರೆ.

ಎಡಗೈ ವೇಗದ ಬೌಲರ್ ಉನದ್ಕಟ್ ಮುಂಬರುವ ಆವೃತ್ತಿಯ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ. ಫೆ.18ರಂದು ನಡೆಯಲಿರುವ ಮಿನಿ ಹರಾಜು ಪ್ರಕ್ರಿಯೆಗಿಂತ ಮೊದಲು ಜನವರಿ 20ರಂದು ರಾಜಸ್ಥಾನ ಮೂಲದ ಫ್ರಾಂಚೈಸಿ ಉನದ್ಕಟ್ ರನ್ನು ತಂಡದಲ್ಲೇ ಉಳಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News