ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಅಶೋಕ್ ದಿಂಡಾ ನಿವೃತ್ತಿ
Update: 2021-02-04 11:17 IST
ಕೋಲ್ಕತಾ : ಭಾರತ ಹಾಗೂ ಬಂಗಾಳದ ಪರ ಆಡಿದ್ದ ಅಶೋಕ್ ದಿಂಡಾ ಮಂಗಳವಾರ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 36ರ ಹರೆಯದ ದಿಂಡಾ 2005ರ ನವೆಂಬರ್ ನಲ್ಲಿ ಮಹಾರಾಷ್ಟ್ರದ ವಿರುದ್ಧ ಆಡುವುದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿದ್ದರು. 116 ಪ್ರಥಮ ದರ್ಜೆಗಳನ್ನು ಆಡಿರುವ ದಿಂಡಾ ಕೇವಲ 28ರ ಸರಾಸರಿಯಲ್ಲಿ ಒಟ್ಟು 420 ವಿಕೆಟ್ ಗಳನ್ನು ಉರುಳಿಸಿದ್ದಾರೆ. 2011-12ರ ಋತುವಿನಲ್ಲಿ ಉತ್ತರ ವಲಯದ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಶ್ರೇಷ್ಠ ಪ್ರದರ್ಶನ(8-123)ನೀಡಿದ್ದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 151 ವಿಕೆಟ್‌ಗಳನ್ನು, ಟಿ-20 ಮಾದರಿಯಲ್ಲಿ 151 ವಿಕೆಟ್‌ಗಳನ್ನು ಪಡೆದಿದ್ದರು. ದಿಂಡಾ ಭಾರತದ ಪರ 13 ಏಕದಿನ ಹಾಗೂ 9 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಎರಡು ಮಾದರಿಯ ಕ್ರಿಕೆಟ್‌ನಲ್ಲಿ ಕ್ರಮವಾಗಿ 12 ಹಾಗೂ 17 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ದಿಂಡಾ ಈ ಋತುವಿನಲ್ಲಿ ಗೋವಾ ರಣಜಿ ತಂಡವನ್ನು ಪ್ರತಿನಿಧಿಸಿದ್ದರು.