ಆಸ್ಟ್ರೇಲಿಯ ಪ್ರವಾಸ ರದ್ದುಗೊಳಿಸಿರುವುದು ಕ್ರಿಕೆಟ್ ಜಗತ್ತಿನಲ್ಲಿ ಕರಾಳ: ಪೀಟರ್ಸನ್
ಹೊಸದಿಲ್ಲಿ: ದಕ್ಷಿಣ ಆಫ್ರಿಕ ಪ್ರವಾಸವನ್ನು ಮುಂದೂಡುವ ಆಸ್ಟ್ರೇಲಿಯದ ನಿರ್ಧಾರವನ್ನು ಟೀಕಿಸಿರುವ ಇಂಗ್ಲೆಂಡ್‌ನ ಮಾಜಿ ತಂಡದ ನಾಯಕ ಮೈಕೆಲ್ ವಾನ್ ಮತ್ತು ಕೆವಿನ್ ಪೀಟರ್ಸನ್ ಭಾರತದಂತಹ ಪ್ರಬಲ ಕ್ರಿಕೆಟ್ ರಾಷ್ಟ್ರದ ವಿರುದ್ಧದ ಸರಣಿಯಾಗಿದ್ದರೆ ಆಸ್ಟ್ರೇಲಿಯಕ್ಕೆ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಿತ್ತೆ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಆರೋಗ್ಯ ಮತ್ತು ಸುರಕ್ಷತೆಯನ್ನು ಉಲ್ಲೇಖಿಸಿ ಕ್ರಿಕೆಟ್ ಆಸ್ಟ್ರೇಲಿಯವು ದಕ್ಷಿಣ ಆಫ್ರಿಕ ಪ್ರವಾಸವನ್ನು ಮುಂದೂಡುವ ನಿರ್ಧಾರವನ್ನು ಪ್ರಕಟಿಸಿತು.
ತಮ್ಮ ವೃತ್ತಿಜೀವನದ ಅವಧಿಯಲ್ಲಿ ಸ್ವಲ್ಪ ಸಮಯದವರೆಗೆ ಇಂಗ್ಲೆಂಡ್‌ನ ನಾಯಕತ್ವ ವಹಿಸಿದ್ದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಪೀಟರ್ಸನ್ ಕೂಡ ಪ್ರವಾಸದಿಂದ ಹಿಂದೆ ಸರಿಯುವ ಆಸ್ಟ್ರೇಲಿಯದ ನಿರ್ಧಾರವನ್ನು ಖಂಡಿಸಿದರು.
‘‘ಕ್ರಿಕೆಟ್ ಜಗತ್ತಿನಲ್ಲಿ ಇದು ನಿಜವಾಗಿಯೂ ಕರಾಳ ಸಮಯವಾಗಿದೆ’’ ಎಂದು ಅವರು ಹೇಳಿದ್ದಾರೆ. ಮಂಗಳವಾರ ಟೆಸ್ಟ್ ಪ್ರವಾಸವನ್ನು ಕ್ರಿಕೆಟ್ ಆಸ್ಟ್ರೇಲಿಯ ಮುಂದೂಡಿದ್ದಕ್ಕಾಗಿ ತನ್ನ ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಳಿ ಪ್ರತಿಸ್ಪರ್ಧಿಯನ್ನು ದೂಷಿಸಿತ್ತು. ಸಿಎ ನಿರ್ಧಾರದಿಂದ ನಾವು ತುಂಬಾ ನಿರಾಶೆಗೊಂಡಿದ್ದೇವೆ ಎಂದು ಸಿಎಸ್‌ಎ ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಮಂಗಳವಾರ ಪತ್ರಿಕಾ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ಆಸ್ಟ್ರೇಲಿಯ ಪ್ರವಾಸವು ಆರ್ಥಿಕವಾಗಿ ಚೇತರಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಸಹಾಯ ಮಾಡಿತು.