ವಾಗ್ದಂಡನೆ ‘ಅಸಾಂವಿಧಾನಿಕ’; ವಿಚಾರಣೆಗೆ ಹಾಜರಾಗುವುದಿಲ್ಲ: ಟ್ರಂಪ್

Update: 2021-02-05 14:20 GMT

ವಾಶಿಂಗ್ಟನ್, ಫೆ. 5: ಅಮೆರಿಕದ ಸಂಸತ್ತಿನ ಘಟಕವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ, ತನ್ನ ವಾಗ್ದಂಡನೆಗೆ ಸಂಬಂಧಿಸಿ ವಿಚಾರಣೆ ಎದುರಿಸಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ನಿರಾಕರಿಸಿದ್ದಾರೆ ಹಾಗೂ ಈ ಪ್ರಕ್ರಿಯೆ ‘ಅಸಾಂವಿಧಾನಿಕ’ವಾಗಿದೆ ಎಂದು ಅವರು ಹೇಳಿದ್ದಾರೆ.

 ಜನವರಿ 6ರಂದು ಅಮೆರಿಕದ ಸಂಸತ್ತಿನ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಪ್ರಾಸಿಕ್ಯೂಟರ್ ಜೇಮೀ ರಸ್ಕಿನ್ ಬರೆದ ಪತ್ರವನ್ನು ಟ್ರಂಪ್ ವಕೀಲರು ತಳ್ಳಿಹಾಕಿದ್ದಾರೆ. ‘‘ಇದು ಸಾರ್ವಜನಿಕರ ಗಮನ ಸೆಳೆಯುವುದಕ್ಕಾಗಿ ಸಾರ್ವಜನಿಕ ಸಂಪರ್ಕ ಇಲಾಖೆ ನಡೆಸಿರುವ ತಂತ್ರವಾಗಿದೆ’’ ಎಂದು ಅವರು ಬಣ್ಣಿಸಿದ್ದಾರೆ.

‘‘ನಿಮ್ಮ ಪತ್ರದಲ್ಲಿ ಪ್ರತಿಯೊಬ್ಬರಿಗೂ ಏನು ಗೊತ್ತಿದೆಯೋ ಅಷ್ಟೇ ಇದೆ. ಟ್ರಂಪ್ ವಿರುದ್ಧದ ನಿಮ್ಮ ಆರೋಪಗಳನ್ನು ಸಾಬೀತುಪಡಿಸಲು ನಿಮಗೆ ಸಾಧ್ಯವಿಲ್ಲ’’ ಎಂದು ಟ್ರಂಪ್ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News