ಮೊದಲ ಟೆಸ್ಟ್: ಇಂಗ್ಲೆಂಡ್ 578 ರನ್ ಗೆ ಆಲೌಟ್

Update: 2021-02-07 06:37 GMT

ಚೆನ್ನೈ: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 578 ರನ್ ಗೆ ಆಲೌಟ್ ಮಾಡಿದೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಗಳಿಸಿರುವ ಬೃಹತ್ ಮೊತ್ತಕ್ಕೆ ಉತ್ತರಿಸಹೊರಟಿರುವ ಭಾರತವು ಆರಂಭಿಕ ಆಘಾತಕ್ಕೆ ಒಳಗಾಗಿದೆ. 44 ರನ್ ಗೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(6)ಹಾಗೂ ಶುಭಮನ್ ಗಿಲ್(29)ವಿಕೆಟನ್ನು ಕಳೆದುಕೊಂಡಿದೆ.

ಲಂಚ್ ವಿರಾಮದ ವೇಳೆಗೆ ಭಾರತವು 14 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದ್ದು, ಚೇತೇಶ್ವರ ಪೂಜಾರ(20)ಹಾಗೂ ವಿರಾಟ್ ಕೊಹ್ಲಿ(4)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು 8 ವಿಕೆಟ್ ನಷ್ಟಕ್ಕೆ 555 ರನ್ ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 190.1 ಓವರ್ ಗಳಲ್ಲಿ 578 ರನ್ ಗೆ ಆಲೌಟಾಗಿದೆ.

ಭಾರತದ ಬೌಲಿಂಗ್ ವಿಭಾಗದಲ್ಲಿ ಜಸ್‍ಪ್ರೀತ್ ಬುಮ್ರಾ(3-84), ರವಿಚಂದ್ರನ್ ಅಶ್ವಿನ್(3-146), ತಲಾ 3 ವಿಕೆಟ್ ಗಳನ್ನು ಪಡೆದರೆ, ಇಶಾಂತ್ ಶರ್ಮಾ(2-52)ಹಾಗೂ ಶಹಬಾಝ್ ನದೀಮ್(2-167)ತಲಾ ಎರಡು ವಿಕೆಟ್ ಪಡೆದರು. 28 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಡಾಮ್ ಬೆಸ್ 34 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಆ್ಯಂಡರ್ಸನ್ ವಿಕೆಟ್ ಪಡೆದ ಅಶ್ವಿನ್ ಇಂಗ್ಲೆಂಡ್ ದಿಟ್ಟ ಹೋರಾಟಕ್ಕೆ ತೆರೆ ಎಳೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News