ಮೊದಲ ಟೆಸ್ಟ್: ಪಂತ್, ಪೂಜಾರ ಅರ್ಧಶತಕ, ಭಾರತ 257/6

Update: 2021-02-07 11:59 GMT

ಚೆನ್ನೈ: ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ (91, 88 ಎಸೆತ, 9 ಬೌಂಡರಿ, 5 ಸಿಕ್ಸರ್)ಹಾಗೂ ಚೇತೇಶ್ವರ ಪೂಜಾರ(73,143 ಎಸೆತ, 11 ಬೌಂಡರಿ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಮೊದಲ ಇನಿಂಗ್ಸ್ ನ ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್ ಗಳ ನಷ್ಟಕ್ಕೆ 257 ರನ್ ಗಳಿಸಿದೆ.

ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 578 ರನ್ ಗೆ ನಿಯಂತ್ರಿಸಿದ ಭಾರತ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಬೇಗನೆ ಔಟಾದರು. ನಾಯಕ ವಿರಾಟ್ ಕೊಹ್ಲಿ (11)ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(1)ಕೈಕೊಟ್ಟರು. ಆಗ ಎಂದಿನಂತೆ ತಂಡದ ರಕ್ಷಣೆಗೆ ಮುಂದಾದವರು ಚೇತೇಶ್ವರ ಪೂಜಾರ(73, 143 ಎಸೆತ, 11 ಬೌಂ.)ಹಾಗೂ ಪಂತ್(91). ಈ ಇಬ್ಬರು 5ನೇ ವಿಕೆಟ್ ಜೊತೆಯಾಟದಲ್ಲಿ 119 ರನ್ ಸೇರಿಸಿದರು. ವಾಷಿಂಗ್ಟನ್ ಸುಂದರ್(ಔಟಾಗದೆ 33) ಅವರು ಪಂತ್ ರೊಂದಿಗೆ 6ನೇ ವಿಕೆಟ್ ಗೆ 33 ರನ್ ಹಾಗೂ ಆರ್. ಅಶ್ವಿನ್ ರೊಂದಿಗೆ 7ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 32 ರನ್ ಸೇರಿಸಿದರು.

ಇಂಗ್ಲೆಂಡ್ ಪರ ಡಾಮ್ ಬೆಸ್ 55 ರನ್ ಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News