ಆಸ್ಟ್ರೇಲಿಯನ್ ಓಪನ್ : ಬಾರ್ಟಿ ನಾಲ್ಕನೇ ಸುತ್ತಿಗೆ
Update: 2021-02-14 10:27 IST
ಮೆಲ್ಬೋರ್ನ್: ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ಶನಿವಾರ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಎಕಟೆರಿನಾ ಅಲೆಕ್ಸಾಂಡ್ರೊವಾ ವಿರುದ್ಧ 6-2, 6-4 ಸೆಟ್‌ಗಳಿಂದ ಜಯಗಳಿಸಿದ ವಿಶ್ವದ ನಂಬರ್ ಒನ್ ಆಟಗಾರ್ತಿ ಆ್ಯಶ್ ಬಾರ್ಟಿ 4ನೇ ಸುತ್ತು ತಲುಪಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಚಾಂಪಿಯನ್ ಆಗುವ ಕನಸು ಕಾಣುತ್ತಿರುವ 2019ರ ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಟಿ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಶೆಲ್ಬಿ ರೋಜರ್ಸ್‌ರನ್ನು ಎದುರಿಸಲಿದ್ದಾರೆ. 1978ರ ನಂತರ ಮೊದಲ ಬಾರಿ ಆಸ್ಟ್ರೇಲಿಯದ ಬಾರ್ಟಿ ಸ್ವದೇಶದಲ್ಲಿ ಗ್ರಾನ್ ಸ್ಲಾಮ್ ಕಿರೀಟ ಧರಿಸಲು ಪ್ರಯತ್ನಿಸುತ್ತಿದ್ದಾರೆ.