×
Ad

2ನೇ ಟೆಸ್ಟ್: 134 ನ್ ಗಳಿಗೆ ಆಲೌಟ್ ಆದ ಇಂಗ್ಲೆಂಡ್ ತಂಡ

Update: 2021-02-14 15:43 IST

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2ನೇ ಟೆಸ್ಟ್ ಪಂದ್ಯಾಟವು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಜಯಗಳಿಸಿದ್ದ ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಕೇವಲ 134 ರನ್‌ ಗಳಿಸಿದ ಇಂಗ್ಲೆಂಡ್‌ ತಂಡವು ತನ್ನೆಲ್ಲಾ ವಿಕೆಟ್‌ ಗಳನ್ನು ಕಳೆದುಕೊಂಡಿದೆ.

42 ರನ್‌ ಗಳಿಸಿದ ವಿಕೆಟ್‌ ಕೀಪರ್‌ ಫೋಕ್ಸ್‌ ತಂಡದಲ್ಲಿ ಅತಿಹೆಚ್ಚು ರನ್‌ ಗಳಿಸಿದರು. ಸ್ಪಿನ್‌ ಮೋಡಿಯ ಮೂಲಕ ಇಂಗ್ಲೆಂಡ್‌ ಆಟಗಾರರ ಬೆವರಿಳಿಸಿದ ಆರ್‌ ಅಶ್ವಿನ್‌ 43‌ ರನ್‌ ನೀಡಿ ಐದು ವಿಕೆಟ್‌ ಕಬಳಿಸಿದರು. ಇಶಾಂತ್‌ ಶರ್ಮ ಹಾಗೂ ಅಕ್ಸರ್‌ ಪಟೇಲ್‌ ತಲಾ 2 ವಿಕೆಟ್‌ ಪಡೆದರೆ ಸಿರಾಜ್‌ ಒಂದು ವಿಕೆಟ್‌ ಪಡೆದರು.

ಸದ್ಯ ಭಾರತ ತಂಡವು ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ್ದು, 218 ರನ್‌ ಗಳ ಮುನ್ನಡೆಯನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News