ಭಾರತ ವಿರುದ್ಧ ಸೋತ ಬೆನ್ನಿಗೇ ಮೊಯಿನ್ ಅಲಿ ಕ್ಷಮೆ ಕೋರಿದ ಜೋ ರೂಟ್: ಕಾರಣ ಏನು ಗೊತ್ತಾ?

Update: 2021-02-18 05:18 GMT

ಚೆನ್ನೈ: ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತ ವಿರುದ್ಧ 2ನೇ  ಟೆಸ್ಟ್  ನಲ್ಲಿ ಹೀನಾಯವಾಗಿ ಸೋತ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊಯಿನ್ ಅಲಿ ಕುರಿತು ನೀಡಿರುವ ಹೇಳಿಕೆಗೆ ಜೋ ರೂಟ್ ಹಾಗೂ ಕೋಚ್ ಕ್ರಿಸ್  ಸಿಲ್ವರ್ ವುಡ್ ಬಹಿರಂಗ ಕ್ಷಮೆ ಕೋರಿದ್ದಾರೆ.

ಇಂಗ್ಲೆಂಡ್ ತಂಡ ಹೋಟೆಲ್‍ಗೆ ವಾಪಸಾದ  ಬಳಿಕ ರೂಟ್ ಅವರು ಮೊಯಿನ್ ಅಲಿಯವರಲ್ಲಿ ಕ್ಷಮೆ ಕೋರಿದ್ದಾರೆ. ಅಲಿಯವರು ರೂಟ್ ಕ್ಷಮೆ ಯನ್ನು ಸ್ವೀಕರಿಸಿದ್ದು ಅಲಿ ಅವರು ಭಾರತದ ವಿರುದ್ಧ ಈ ತಿಂಗಳ ಅಂತ್ಯದಲ್ಲಿ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ವಾಪಾಸಾಗುವ ನಿರೀಕ್ಷೆಯಿದೆ. 

ಮೊಯಿನ್ ಅಲಿಗೆ ಬಹಿರಂಗವಾಗಿ ಕ್ಷಮೆ ಕೋರಿದ ಇಂಗ್ಲೆಂಡ್ ಕೋಚ್ ಸಿಲ್ವರ್ ವುಡ್ ಮೊದಲಿಗೆ ನಮ್ಮನ್ನು ಕ್ಷಮಿಸಿ. ನಿನ್ನೆ ನಾವು ನಿಮ್ಮನ್ನು ಇತರರಿಗಿಂತ ವಿಭಿನ್ನವಾಗಿ ನಡೆಸಿಕೊಂಡೆವು. ಇನ್ನು ಮುಂದೆ ಹಾಗೆ ಆಗುವುದಿಲ್ಲ ಎಂದು ನಿಮಗೆ ಖಾತರಿ ನೀಡುತ್ತೇನೆ ಎಂದು ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೂಟ್ ಬಯೋಬಬಲ್‍ನಲ್ಲಿ ಆಟಗಾರರು ದೀರ್ಘಕಾಲದವರೆಗೆ ಉಳಿಯುವುದು ಕಷ್ಟ. ಹೀಗಾಗಿ ನಮ್ಮ ರಾಷ್ಟ್ರೀಯ ತಂಡದ ನೀತಿಯಂತೆ ಆಟಗಾರರನ್ನು ರೋಟೇಶನ್ ಪದ್ಧತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅದರಂತೆ ಈ ಬಾರಿ ಮೊಯಿನ್ ಅಲಿಯವರನ್ನು ರೋಟೇಶನ್‍ಗೆ ಆಯ್ಕೆ ಮಾಡಲಾಗಿದ್ದು ಮುಂದಿನ 2 ಪಂದ್ಯಗಳಿಗೆ ಅವರನ್ನು ಕೈಬಿಡಲಾಗಿದೆ.  ಅವರ ಬದಲಿಗೆ ಬೈರ್ ಸ್ಟೋ ಅವರನ್ನು ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು. 

ಆಟಗಾರರು ಬಯೋಬಬಲ್‍ನಿಂದ ಹೊರಹೋಗಲು ಬಯಸಿದರೆ ಅದು ಅವರಿಗೆ ಆಯ್ಕೆಯಾಗಿರುತ್ತದೆ. ಬೆನ್ ಸ್ಟ್ರೋಕ್ಸ್, ಜೋ ಬಟ್ಲರ್, ಸ್ಯಾಮ್ ಕರನ್, ಜೋಫ್ರಾ ಅರ್ಚರ್ ಹಾಗೂ ಮಾರ್ಕ್‍ವುಡ್ ರೋಟೇಶನ್ ನಿಯಮದ ಲಾಭವನ್ನು ಪಡೆದಿದ್ದಾರೆ ಎಂದು ರೂಟ್ ಈ ಮೊದಲು ಹೇಳಿದ್ದರು. 

ಮಂಗಳವಾರ ರೂಟ್ ಅವರ ಈ ಹೇಳಿಕೆ ಉದ್ದೇಶಪೂರ್ವಕವಾಗಿ ಬಂದಿದೆಯೋ ಅಥವಾ ತಂಡದ ಕಾರ್ಯಯೋಜನೆಯೋ ತಿಳಿದಿಲ್ಲ. ಈ ದಿಢೀರ್ ನಿರ್ಧಾರಕ್ಕೆ ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳು ನಿರಾಶರಾಗಿದ್ದಾರೆ. 
 
2ನೇ  ಟೆಸ್ಟ್ ನಲ್ಲಿ ಮೊಯಿನ್ ಅಲಿ ಭಾರತದ ವಿರುದ್ದ 2 ಇನಿಂಗ್ಸ್ನ ಲ್ಲಿ 8 ವಿಕೆಟ್‍ಗಳನ್ನು ಪಡೆದಿದ್ದರು. ತಂಡ ಸಂಕಷ್ಟದಲ್ಲಿದ್ದಾಗ 18 ಎಸೆತಕ್ಕೆ 43 ರನ್ ಗಳಿಸಿದ್ದರು. ಇದರ ಹೊರತಾಗಿಯೂ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News