ಐಪಿಎಲ್ ಹರಾಜು: 5.25 ಕೋಟಿ ರೂ.ಗೆ ಮಾರಾಟಗೊಂಡ ಶಾರೂಖ್ ಖಾನ್

Update: 2021-02-18 17:15 GMT

ಹೊಸದಿಲ್ಲಿ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಹಲವಾರು ಆಟಗಾರರು ಮತ್ತು ತಂಡಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಐಪಿಎಲ್ ನ 14ನೇ ಆವೃತ್ತಿಯಲ್ಲಿ ಒಟ್ಟು 292 ಆಟಗಾರರು ಹರಾಜಿನ ಕಣದಲ್ಲಿದ್ದು, ಎಂಟು ಪ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದೆ.

ಇದೀಗ ತಮಿಳುನಾಡು ಮೂಲದ ಆಟಗಾರ ಶಾರೂಖ್‌ ಖಾನ್‌ 5.25 ಕೋಟಿ ರೂ.ಗೆ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಹರಾಜಾಗಿದ್ದಾರೆ. ಶಾರೂಖ್‌ ಖಾನ್‌ 20 ಲಕ್ಷ ರೂ. ಮೂಲಬೆಲೆಯನ್ನು ಹೊಂದಿದ್ದರು. ತಮಿಳುನಾಡು ತಂಡದ ಪರವಾಗಿ ಪ್ರಥಮ ರಣಜಿ ಪಂದ್ಯವನ್ನು ಆಡಿದ್ದ ಶಾರೂಖ್‌ ಉತ್ತಮ ಬ್ಯಾಟ್ಸ್‌ ಮನ್‌ ಆಗಿದ್ದಾರೆ. 

ಈಗಾಗಲೇ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಮತ್ತು ಕ್ರಿಸ್‌ ಮೋರಿಸ್‌ ಭಾರೀ ಮೊತ್ತಗಳಿಗೆ ಹರಾಜಾಗಿದ್ದು, ಕರ್ನಾಟಕದ ಕೃಷ್ಣಪ್ಪ ಗೌತಮ್‌ 9.5ಕೋಟಿ ರೂ. ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News