ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮಾರಾಟವಾದ ಸಚಿನ್‌ ಪುತ್ರ ಅರ್ಜುನ್‌ ತೆಂಡೂಲ್ಕರ್

Update: 2021-02-18 15:46 GMT

ಹೊಸದಿಲ್ಲಿ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಹಲವಾರು ಆಟಗಾರರು ಮತ್ತು ತಂಡಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಐಪಿಎಲ್ ನ 14ನೇ ಆವೃತ್ತಿಯಲ್ಲಿ ಒಟ್ಟು 292 ಆಟಗಾರರು ಹರಾಜಿನ ಕಣದಲ್ಲಿದ್ದು, ಎಂಟು ಪ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದೆ.‌

ಐಪಿಎಲ್‌ ಹರಾಜು ಪ್ರಕ್ರಿಯೆಗೆ ಆಯ್ಕೆಗೊಂಡಂದಿನಿಂದಲೇ ಹಲವರ ಗಮನ ಸೆಳೆದಿದ್ದ ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ರನ್ನು ಮುಂಬೈ ಇಂಡಿಯನ್ಸ್‌ ತಂಡವು ಖರೀದಿಸಿದೆ. ಅರ್ಜುನ್‌ ತೆಂಡೂಲ್ಕರ್‌ ರ ಮೂಲಬೆಲೆಯು 20 ಲಕ್ಷ ಆಗಿದ್ದು, ಮುಂಬೈ ಇಂಡಿಯನ್ಸ್‌ ಹೊರತುಪಡಿಸಿ ಇತರ ಯಾವ ತಂಡಗಳೂ ಬಿಡ್‌ ಮಾಡದ ಕಾರಣ 20 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್‌ ತಂಡವು ಖರೀದಿಸಿದೆ.

ಹಲವಾರು ಪ್ರತಿಭಾವಂತ ಕ್ರಿಕೆಟಿಗರಿದ್ದರೂ, ಅರ್ಜುನ್‌ ತೆಂಡೂಲ್ಕರ್‌ ಹೆಸರನ್ನು ಐಪಿಎಲ್‌ ಹರಾಜು ಪಟ್ಟಿಗೆ ಸೇರ್ಪಡೆಗೊಳಿಸಿದ ಕುರಿತು ಸಾಮಾಜಿಕ ತಾಣದಾದ್ಯಂತ ವ್ಯಾಪಕ ಟೀಕೆ ಹಾಗೂ ವ್ಯಂಗ್ಯ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News