ನೈಜೀರಿಯ: ಸೇನಾ ವಿಮಾನ ಪತನ; 7 ಸಾವು

Update: 2021-02-22 15:13 GMT
photo:twitter (@ScooperNG)

 ಅಬುಜ (ನೈಜೀರಿಯ), ಫೆ. 22: ನೈಜೀರಿಯದ ರಾಜಧಾನಿ ಅಬುಜ ಸಮೀಪ ರವಿವಾರ ಸೇನಾ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ವಾಯುಪಡೆ ವಕ್ತಾರರೊಬ್ಬರು ತಿಳಿಸಿದ್ದಾರೆ.

 ಸಮೀಪದ ನೈಜರ್ ರಾಜ್ಯದಲ್ಲಿರುವ ಶಾಲೆಯೊಂದರಿಂದ ಬುಧವಾರ ಅಪಹರಣಗೊಂಡ ವಿದ್ಯಾರ್ಥಿಗಳ ಶೋಧ ಕಾರ್ಯಾಚರಣೆಯಲ್ಲಿ ವಿಮಾನ ತೊಡಗಿತ್ತು.

 ಬಂದೂಕುಧಾರಿಗಳು ಓರ್ವ ವಿದ್ಯಾರ್ಥಿಯನ್ನು ಕೊಂದು, 27 ವಿದ್ಯಾರ್ಥಿಗಳು, ಮೂವರು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಸಂಬಂಧಿಕರು ಸೇರಿದಂತೆ 42 ಮಂದಿಯನ್ನು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ವಿಮಾನ ಪತನಗೊಂಡಿರುವುದಕ್ಕೆ ಕಾರಣ ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News