ಆಸ್ಟ್ರೇಲಿಯದಲ್ಲಿ ಕೋವಿಡ್-19 ಲಸಿಕಾ ಅಭಿಯಾನ ಆರಂಭ ಮೊದಲ ಲಸಿಕೆ ತೆಗೆದುಕೊಂಡ ಪ್ರಧಾನಿ ಮೊರಿಸನ್

Update: 2021-02-22 15:25 GMT
photo: twitter

ಮೆಲ್ಬರ್ನ್ (ಆಸ್ಟ್ರೇಲಿಯ), ಫೆ. 22: ಆಸ್ಟ್ರೇಲಿಯದಲ್ಲಿ ಸೋಮವಾರ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನ ಆರಂಭಗೊಂಡಿದೆ.

ಲಸಿಕಾ ಅಭಿಯಾನದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ಲಸಿಕೆಗಳು ಸುರಕ್ಷಿತ ಎನ್ನುವುದನ್ನು ಮನವರಿಕೆ ಮಾಡಿಕೊಡುವುದಕ್ಕಾಗಿ ಪ್ರಧಾನಿ ಸ್ಕಾಟ್ ಮೊರಿಸನ್ ರವಿವಾರ ಎಲ್ಲರಿಗೂ ಮುಂಚಿತವಾಗಿ ಲಸಿಕೆ ಸ್ವೀಕರಿಸಿದ್ದಾರೆ.

 ಮೆಲ್ಬರ್ನ್ ಮತ್ತು ಸಿಡ್ನಿ ನಗರಗಳಲ್ಲಿ ವೈದ್ಯಕೀಯ ಮತ್ತು ಕ್ವಾರಂಟೈನ್ ಸಿಬ್ಬಂದಿಗಳಿಗೆ ಸೋಮವಾರ ಮೊದಲಾಗಿ ಲಸಿಕೆಗಳನ್ನು ನೀಡಲಾಯಿತು.

ಲಸಿಕಾ ಅಭಿಯಾನಕ್ಕೆ ವಿರೋಧ ವ್ಯಕ್ತವಾಗಿರುವ ಹೊರತಾಗಿಯೂ, 80 ಶೇಕಡ ಆಸ್ಟ್ರೇಲಿಯನ್ನರು ಲಸಿಕೆ ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ದೇಶದಲ್ಲಿ ಮೊದಲ ಹಂತದಲ್ಲಿ ಫೈಝರ್-ಬಯೋಎನ್‌ಟೆಕ್ ಲಸಿಕೆಯ ಡೋಸ್‌ಗಳನ್ನು ನೀಡಲಾಗುತ್ತಿದೆ. ನಂತರದ ಹಂತದಲ್ಲಿ ಸ್ಥಳೀಯವಾಗಿ ತಯಾರಿಸಲಾದ ಆ್ಯಸ್ಟ್ರಝೆನೆಕ ಲಸಿಕೆಗಳನ್ನು ಬಳಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News