ಪಾಕ್: 4 ಮಹಿಳಾ ನೆರವು ಕಾರ್ಯಕರ್ತರ ಹತ್ಯೆ

Update: 2021-02-22 15:45 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಫೆ. 22: ವಾಯುವ್ಯ ಪಾಕಿಸ್ತಾನದ ನಾರ್ತ್ ವಝೀರಿಸ್ತಾನ ಜಿಲ್ಲೆಯಲ್ಲಿ ನೆರವು ಕಾರ್ಯಕರ್ತರ ಗುಂಪೊಂದನ್ನು ಗುರಿಯಾಗಿಸಿ ಸೋಮವಾರ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ವರು ಮಹಿಳಾ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರವು ಕಾರ್ಯಕರ್ತರ ವಾಹನದ ಮೇಲೆ ಹಂತಕರು ಮನಬಂದಂತೆ ಗುಂಡು ಹಾರಿಸಿ ಪರಾರಿಯಾದರು. ವಾಹನದ ಚಾಲಕ ಗಾಯಗೊಂಡಿದ್ದಾರೆ.
‘‘ಇದು ಭಯೋತ್ಪಾದನೆ ಪೀಡಿತ ಜಿಲ್ಲೆಯಾಗಿದೆ. ಇಲ್ಲಿ ಎಲ್ಲೆಡೆಯೂ ಬೆದರಿಕೆಯಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಅಮೆರಿಕದ ಸಾನ್ಫ್ರಾನ್ಸಿಸ್ಕೊದಲ್ಲಿರುವ ರಾಣಿ ವಿಕ್ಟೋರಿಯ ಕಾಲದ ಮನೆಯೊಂದನ್ನು ಟ್ರಕ್ಕೊಂದರಲ್ಲಿ ರವಿವಾರ ಸ್ಥಳಾಂತರಿಸಲಾಯಿತು. ಅಪಾರ್ಟ್ಮೆಂಟ್ ಕಟ್ಟಡವೊಂದರ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಡುವುದಕ್ಕಾಗಿ 1882ರಲ್ಲಿ ನಿರ್ಮಾಣವಾದ ಮನೆಯನ್ನು ಅದರ ಮೂಲ ಸ್ಥಳದಿಂದ ಆರು ಬ್ಲಾಕ್ ದೂರದಲ್ಲಿರುವ ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News