×
Ad

ಮೂರನೇ ಟೆಸ್ಟ್: ಭಾರತ 145 ರನ್ ಗೆ ಆಲೌಟ್

Update: 2021-02-25 16:29 IST

ಅಹಮದಾಬಾದ್: ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅರ್ಧಶತಕದ ಕೊಡುಗೆಯ ಹೊರತಾಗಿಯೂ ಭಾರತ ತಂಡ ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 53.2 ಓವರ್ ಗಳಲ್ಲಿ 145 ರನ್ ಗಳಿಸಿ ಆಲೌಟಾಗಿದೆ. ಈ ಮೂಲಕ ಕೇವಲ 33 ರನ್‍ಮುನ್ನಡೆ ಪಡೆದಿದೆ.

ಎರಡನೇ ದಿನದಾಟವಾದ ಗುರುವಾರ 3 ವಿಕೆಟ್ ನಷ್ಟಕ್ಕೆ 99 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ಜೋ ರೂಟ್ (5-8) ಅಮೋಘ ಬೌಲಿಂಗ್  ಹಾಗೂ ಜಾಕ್ ಲೀಚ್(4-54)ಸಾಂದರ್ಭಿಕ ಆಟಕ್ಕೆ ತತ್ತರಿಸಿದ ಭಾರತ 145 ರನ್‍ಗೆ ಆಲೌಟಾಯಿತು.

ಭಾರತದ ಪರ ರೋಹಿತ್ ಅಗ್ರ ಸ್ಕೋರರ್(66, 96 ಎಸೆತ, 11 ಬೌಂಡರಿ)ಎನಿಸಿಕೊಂಡರು. ನಾಯಕ ವಿರಾಟ್ ಕೊಹ್ಲಿ 27, ಅಶ್ವಿನ್ 17 ರನ್ ಗಳಿಸಿದರು. 

ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ ಕೇವಲ 112 ರನ್ ಗೆ ಆಲೌಟಾಗಿತ್ತು.’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News